×
Ad

ಶಾಹೀನ್ ಕಾಲೇಜ್ : ಪಿಯುಸಿಯಲ್ಲಿ 600ಕ್ಕೆ 600 ಅಂಕ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನ

Update: 2021-07-23 17:33 IST

ಬೀದರ್: ಇಲ್ಲಿನ ಶಾಹೀನ್ ಪದವಿಪೂರ್ವ ವಿಜ್ಞಾನ ಕಾಲೇಜಿನಲ್ಲಿ ನಡೆದ ಸಮಾರಂಭದಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ 600ಕ್ಕೆ 600 ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

ಜಿಲ್ಲಾಧಿಕಾರಿ ರಾಮಚಂದ್ರನ್ ಆರ್, ಶಾಹೀನ್ ಶಿಕ್ಷಣ ಸಮೂಹ ಸಂಸ್ಥೆಗಳ ಅಧ್ಯಕ್ಷ ಡಾ. ಅಬ್ದುಲ್ ಖದೀರ್ ಅವರು ಈ ಸಂದರ್ಭ ಉಪಸ್ಥಿತರಿದ್ದರು.

53 ವಿದ್ಯಾರ್ಥಿಗಳಿಗೆ 600ಕ್ಕೆ 600 ಅಂಕ

ಪ್ರಸಕ್ತ ಸಾಲಿನ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ಪರೀಕ್ಷೆಯಲ್ಲಿ ಶಾಹೀನ್ ಪದವಿಪೂರ್ವ ವಿಜ್ಞಾನ ಕಾಲೇಜು ಹೊಸ ಇತಿಹಾಸ ಬರೆದಿದೆ. ಕಾಲೇಜಿನ 53 ವಿದ್ಯಾರ್ಥಿಗಳು 600ಕ್ಕೆ 600 ಅಂಕ ಪಡೆದು ಸಾಧನೆ ಮಾಡಿದ್ದಾರೆ.

ಸನ್ಮಾನ ಸಮಾರಂಭದಲ್ಲಿ ಮಾತನಾಡಿದ ಶಾಹೀನ್ ಶಿಕ್ಷಣ ಸಂಸ್ಥೆಗಳ ಸಮೂಹದ ಅಧ್ಯಕ್ಷ ಡಾ. ಅಬ್ದುಲ್ ಖದೀರ್ ಅವರು, ಜಿಲ್ಲೆಯಲ್ಲಿ 600ಕ್ಕೆ 600 ಅಂಕ ಪಡೆದ 54 ವಿದ್ಯಾರ್ಥಿಗಳಲ್ಲಿ ಶಾಹೀನ್ ಕಾಲೇಜಿನ 53 ವಿದ್ಯಾರ್ಥಿಗಳು ಎಂದು ಹೇಳಿದರು.

ಶಾಹೀನ್ ಸಂಸ್ಥೆ ಜಿಲ್ಲೆಯ ಶೈಕ್ಷಣಿಕ ಕ್ಷೇತ್ರದಲ್ಲಿ ಹೊಸ ಮೈಲಿಗಲ್ಲುಗಳನ್ನು ಸ್ಥಾಪಿಸುತ್ತಲೇ ಬಂದಿದೆ. ಈ ಹಿಂದೆ ಎಸೆಸೆಲ್ಸಿ ಉರ್ದು ಮಾಧ್ಯಮದಲ್ಲಿ ರಾಜ್ಯಕ್ಕೆ ಮೊದಲ ರ್ಯಾಂಕ್, ಸಿಇಟಿ ಪಶು ವೈದ್ಯಕೀಯ ವಿಭಾಗದಲ್ಲಿ ರಾಜ್ಯಕ್ಕೆ ಮೊದಲ ರ್ಯಾಂಕ್, ವೈದ್ಯಕೀಯ ವಿಭಾಗದಲ್ಲಿ ಮೂರನೇ ರ್ಯಾಂಕ್, ನೀಟ್‍ನಲ್ಲಿ 9ನೇ ಹಾಗೂ 85ನೇ ರ್ಯಾಂಕ್ ಗಳಿಸಿತ್ತು. ಇದೀಗ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅಮೋಘ ಸಾಧನೆಗೈದು ಮತ್ತೆ ರಾಜ್ಯದ ಗಮನ ಸೆಳೆದಿದೆ ಎಂದು ಹೇಳಿದರು.

22 ವರ್ಷಗಳಲ್ಲಿ ಕಾಲೇಜಿನ 1,900 ವಿದ್ಯಾರ್ಥಿಗಳು ವೈದ್ಯಕೀಯ ಸೀಟು  ಪಡೆದಿದ್ದಾರೆ. ಕಳೆದ ವರ್ಷ ಕಾಲೇಜು 400 ವೈದ್ಯಕೀಯ ಸೀಟುಗಳನ್ನು ಗಳಿಸಿದ್ದು, ಈ ವರ್ಷ ಅದಕ್ಕೂ ಹೆಚ್ಚು ಸೀಟುಗಳನ್ನು ಪಡೆಯುವ ವಿಶ್ವಾಸ ಇದೆ ಎಂದು ಹೇಳಿದರು.

'ಬೀದರ್ ಜಿಲ್ಲೆಗೆ ಹೆಮ್ಮೆಯ ವಿಷಯ'

ಶಾಹೀನ್ ಕಾಲೇಜಿನ 53 ವಿದ್ಯಾರ್ಥಿಗಳು 600ಕ್ಕೆ 600 ಅಂಕ ಗಳಿಸಿರುವುದು ಬೀದರ್ ಜಿಲ್ಲೆಗೆ ಹೆಮ್ಮೆಯ ವಿಷಯವಾಗಿದೆ ಎಂದು ಸಾಧಕ ವಿದ್ಯಾರ್ಥಿಗಳನ್ನು ಸನ್ಮಾನಿಸಿದ ನಂತರ ಜಿಲ್ಲಾಧಿಕಾರಿ ರಾಮಚಂದ್ರನ್ ಆರ್. ನುಡಿದರು.

ಕಾಲೇಜಿನ ಉತ್ತಮ ಶೈಕ್ಷಣಿಕ ವಾತಾವರಣ, ಉಪನ್ಯಾಸಕರ ಮಾರ್ಗದರ್ಶನ, ವಿದ್ಯಾರ್ಥಿಗಳ ಶ್ರಮ ಹಾಗೂ ಪಾಲಕರ ಸಹಕಾರದಿಂದ ಈ ಸಾಧನೆ ಸಾಧ್ಯವಾಗಿದೆ ಎಂದರು.

ಗರಿಷ್ಠ ಅಂಕ ಪಡೆದ ವಿದ್ಯಾರ್ಥಿಗಳು ಜೀವನದ ಪರೀಕ್ಷೆಯಲ್ಲೂ ಯಶಸ್ವಿಯಾಗಬೇಕು. ಆದರ್ಶ ಪ್ರಜೆಗಳಾಗಿ, ಸಮಾಜಕ್ಕೆ ಏನನ್ನಾದರೂ ಕೊಡುಗೆ ನೀಡಬೇಕು ಎಂದು ಸಲಹೆ ಮಾಡಿದರು.

600ಕ್ಕೆ 600 ಅಂಕ ಪಡೆದ ಶಾಹೀನ್ ಕಾಲೇಜಿನ ವಿದ್ಯಾರ್ಥಿಗಳು

ಮುಹಮ್ಮದ್ ಯಾಸಿನ್ ನವಾಝ್, ಮುಹಮ್ಮದ್ ಜೀಶಾನ್ ಹುಸೈನ್, ಶೇಕ್ ಮುಹಮ್ಮದ್, ದಿವ್ಯ ಮೇಗೂರ, ರೋಮಾ ಶೈಲ್ವಿಯ ಮೋಹನ್, ಮುಹಮ್ಮದ್ ಅನಸ್, ವಿದ್ಯಾಶ್ರೀ, ಜಾಧವ ವೇದಾಂತ, ಪ್ರಜ್ವಲ್ ಪಾಟೀಲ, ಅವಿನಾಶ, ರಫಿಯಾ ಫಾತಿಮಾ, ಪಲ್ಲವಿ, ಇಲಿಶ್, ಪೂಜಾ, ಮುಹಮ್ಮದ್ ನೆಹಮುಲ್ತಾಹ, ಅಶ್ರಫ್ ನವಾಝ್, ಅಫಿಯಾ ಮೊಹಮ್ಮದಿ, ವೀರೇಶ, ಅಭಿಷೇಕ, ಎನ್. ನಿಶಾಂತ, ಮುಷ್ಕಾನ್ ಬೇಗಂ, ಸುಜಯ್ ಪಾಟೀಲ, ಮಸೂದಾ ರೋಶನ್, ಗಣೇಶ, ಎನ್.ರಾಜು, ದಾನಿಶ್ ಫಾತಿಮಾ, ಮಹೀನ್ ನೂರಿನ್, ಬಸವರಾಜ, ಸೊಪಿಸಾಬ್ ಸೊಲ್ಲಾಪುರ, ಉಝ್ಮಾ ಬೇಗಂ, ಶಹನಮ್ ಮುಹಮ್ಮದ್, ಅಭಿಷೇಕ, ಮುಹಮ್ಮದ್ ನಿಹಾಲ್, ವಿಶಾಲ, ನವೀನ ಕುಮಾರ, ಭಾರತ ಕುಮಾರ, ಶ್ರೀನಿವಾಸ ಮೇಟಿ, ಗುರು ಪ್ರಸಾದ್ ಗುರುಬಸಪ್ಪ, ಮುಹ್ಮಮದ್ ಮುಜಾಹಿದ್, ಬುಶ್ರಾ ಐಮನ್, ಸೂಫಿಯಾ ಹಸಿಮ್‍ ಸಾಬ್, ಸುಪ್ರೀತ್, ಮೇಘನಾ, ಅವಿನಾಶ, ಭವಾನಿ, ಸಂಜನಾ, ಲಕ್ಷ್ಮಿ, ಆಕಾಶ, ಸಾಕ್ಷ್ಮಿ, ವೈಷ್ಣವಿ, ಚಾಂದ್‍ ಪಾಶಾ, ಶ್ರೀನಿವಾಸ್ ಮತ್ತು ಪ್ರಭು.

ಜಿಲ್ಲಾಧಿಕಾರಿ ರಾಮಚಂದ್ರನ್ ಆರ್, ಸಂಸ್ಥೆಯ ನಿರ್ದೇಶಕರಾದ ಅಬ್ದುಲ್ ಹಸೀಬ್, ಅಬ್ದುಲ್ ಮುಕಿತ್ ಮತ್ತು ವಿವಿಧ ವಿಭಾಗಗಳ ಮುಖ್ಯಸ್ಥರಾದ ಸತೀಶ್ ಪುಟ್ಟ, ಶ್ರೀನಿವಾಸ, ಆರಿಫ್, ಅಬಾಹತ್ ಅನ್ವರ್, ನದೀಮ್ ಹಾಗು ಇತರರು ಈ ಸಂದರ್ಭ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News