25ನೇ ದಿನಕ್ಕೆ ಕಾಲಿರಿಸಿದ ಮೈಸೂರಿನ ಎನ್‍ಟಿಎಂ ಶಾಲೆ ಉಳಿಸಿ ಹೋರಾಟ

Update: 2021-07-23 15:22 GMT

ಮೈಸೂರು,ಜು.23: ಎನ್ ಟಿ ಎಂ ಶಾಲೆ ಉಳಿಸಿ ಹೋರಾಟ ಇಂದು 25ನೇ ದಿನಕ್ಕೆ ಕಾಲಿರಿಸಿದೆ. ವಿವಿಧ ಸಂಘಟನೆಗಳು ಎನ್ ಟಿ.ಎಂ ಶಾಲೆ ಉಳಿಸುವಂತೆ ಒತ್ತಾಯಿಸಿ ಶಾಲೆಯ ಮುಂದೆ ಪ್ರತಿಭಟನೆ ನಡೆಸಲಾಯಿತು. ಶುಕ್ರವಾರ ಲಯನ್ಸ್ ಕ್ಲಬ್ ಮೈಸೂರು ಸೆಂಟ್ರಲ್ ಡಿಸ್ಟ್ರಿಕ್ಟ್ -317ಎ ಕನ್ನಡ ಪರ ಸಂಘಟನೆಗಳೊಂದಿಗೆ ಸೇರಿ ಎನ್ ಟಿ ಎಂ ಉಳಿಸಿ ಹೋರಾಟದಲ್ಲಿ ಪಾಲ್ಗೊಂಡಿತ್ತು.

ಸರ್ಕಾರಿ ಮಹಾರಾಣಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯನ್ನು ಯಥಾಸ್ಥಿತಿಯಲ್ಲಿ ಉಳಿಸಿಕೊಂಡು ಸ್ವಾಮಿ ವಿವೇಕಾನಂದರ ಸ್ಮಾರಕವನ್ನು ಉಳಿಕೆ ಜಾಗದಲ್ಲಿ ಅಥವಾ ಬೇರೆ ಜಾಗದಲ್ಲಿ ನಿರ್ಮಾಣ ಮಾಡುವಂತೆ ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಪ್ರೊ. ನಂಜರಾಜ ಅರಸ್ , ಸ.ರ ಸುದರ್ಶನ , ಮಾಜಿ ಮೇಯರ್ ಪುರುಷೋತ್ತಮ್ , ಅರವಿಂದ್ ಶರ್ಮ , ಭಾನುಮೋಹನ್, ಬೆಟ್ಟಯ್ಯಕೋಟೆ , ಶಂಭುಲಿಂಗಸ್ವಾಮಿ , ಮೋಹನ್ ಕುಮಾರ್ ಗೌಡ ,ಅನಿಲ್ ಕುಮಾರ್, ಕೊ.ಸು ನರಸಿಂಹಮೂರ್ತಿ , ಬಿ.ಪಂಪಾಪತಿ , ಜಿ.ಪ್ರಕಾಶ್ ,ಧನಪಾಲ್ ಕುರುಬರಹಳ್ಳಿ ,ತಾಯೂರು ವಿಠ್ಠಲ ಮೂರ್ತಿ , ಮೂಗೂರು ನಂಜುಂಡಸ್ವಾಮಿ ಶಿವಶಂಕರ್ ,ವೆಂಕಟೇಶ್ ಮಿನಿ ಬಂಗಾರಪ್ಪ , ಸಿದ್ದಪ್ಪ , ಉಗ್ರನರಸಿಂಗೇಗೌಡ ಪಾರ್ಮಸಿ ಸುರೇಶ್ ಬಾಬು , ಸುರೇಶ್ ಬಾಬು ಹಾಗೂ ಲಯನ್ಸ್ ಕ್ಲಬ್ ನ ಸದಸ್ಯ  ಸಿದ್ದೇಗೌಡ , ಕಾರ್ಯದರ್ಶಿ ಗಂಗೋತ್ರಿ ಮಹೇಶ್ , ಶ್ರೀನಿವಾಸ್ , ಗೋವಿಂದ ರಾಜ್ ಸ್ವಾಮಿ ಕುಮಾರ್ ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News