ಕಲಬುರಗಿ: ಎಎಸ್ಸೈ ಆತ್ಮಹತ್ಯೆ
Update: 2021-07-24 22:48 IST
ಕಲಬುರಗಿ, ಜು.24: ಸಿಟಿ ರಿಸರ್ವ್ ಪೊಲೀಸ್ ವಿಭಾಗದಲ್ಲಿನ ಎಎಸ್ಸೈಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಸ್ಟೇಷನ್ ಬಜಾರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಕಲಬುರಗಿಯ ಸಿಟಿ ರಿಸರ್ವ್ ಪೊಲೀಸ್ ವಿಭಾಗದಲ್ಲಿನ ಎಎಸ್ಸೈ ಜಗನ್ನಾಥ್(54) ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ತಿಳಿದುಬಂದಿದೆ.
ಕೆಲ ವರ್ಷಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಜಗನ್ನಾಥ್, ಶನಿವಾರ ಕಲಬುರಗಿ ಜಿಲ್ಲೆಯ ಪೊಲೀಸ್ ವಸತಿ ಗೃಹದಲ್ಲಿಯೇ ಫ್ಯಾನ್‍ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸದ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.