15 ಡಿವೈಎಸ್ಪಿಗಳನ್ನು ವರ್ಗಾವಣೆ ಮಾಡಿ ರಾಜ್ಯ ಸರಕಾರ ಆದೇಶ

Update: 2021-07-24 17:26 GMT

ಬೆಂಗಳೂರು, ಜು.24: ರಾಜ್ಯದ ವಿವಿಧ ಭಾಗದ ಹದಿನೈದು ಡಿವೈಎಸ್ಪಿ ಅಧಿಕಾರಿಗಳನ್ನು ವರ್ಗಾಹಿಸಿ ರಾಜ್ಯ ಸರಕಾರ ಶನಿವಾರ ಆದೇಶ ಹೊರಡಿಸಿದೆ.

ಜಿ.ಎಸ್.ಗಜೇಂದ್ರ ಪ್ರಸಾದ (ಮಡಿಕೇರಿ ಉಪವಿಭಾಗ), ಅಬ್ದುಲ್ ಖಾದರ್ (ಪುಲಕೇಶಿ ನಗರ), ಮನೋಜ್ ಕುಮಾರ್ (ಯಲಹಂಕ), ಎನ್.ಟಿ.ಶ್ರೀನಿವಾಸರೆಡ್ಡಿ (ಬೆಂಗಳೂರಿನಲ್ಲಿ ಅರಣ್ಯ ಘಟಕ), ಮಲ್ಲೇಶಪ್ಪ ಮಲ್ಲಾಪುರ (ಎಸಿಬಿ), ರವೀಂದ್ರ ಎಸ್.ಶಿರೂರು (ಡಿಎಸ್ ಆರ್ ಇ).

ವಾಸುದೇವ್ ಕೆ.ವಿ. (ಚಿಕ್ಕಬಳ್ಳಾಪುರ ಉಪವಿಭಾಗ), ವಿಧ್ವನಾಥ್ ರಾವ್ ಕುಲಕರ್ಣಿ (ಹೊಸಪೇಟೆ ಉಪವಿಭಾಗ), ಅನಿಲ್ ಕುಮಾರ್ ಎಚ್.ಆರ್ (ಸಕಲೇಶಪುರ ಉಪವಿಭಾಗ), ರಾಜಾರಾಮ್ (ಸಿಐಡಿ), ಕೆ.ರವಿಶಂಕರ್ (ಪೊಲೀಸ್ ಪ್ರಧಾನ ಕಚೇರಿ), ವಿ.ರಘುಕುಮಾರ್ (ರಾಜ್ಯ ಗುಪ್ತವಾರ್ತೆ), ಗೋಪಿ ಆರ್., ತಬರಕ್ ಫಾತೀಮಾ (ಸಿಐಡಿ), ಎಚ್.ಎಸ್.ರಾಮಲಿಂಗಗೌಡ (ಸಿಸಿ ಆರ್ ಬಿ) ವರ್ಗಾಹಿಸಲಾಗಿದೆ‌.

ಮುಂಭಡ್ತಿ: ಅದೇ ರೀತಿ,  ಪೊಲೀಸ್ ಇನ್ಸ್ ಪೆಕ್ಟರ್  ಹುದ್ದೆಯಲ್ಲಿದ್ದ 31 ಅಧಿಕಾರಿಗಳನ್ನು ಡಿವೈಎಸ್ ಪಿ ಹುದ್ದೆಗೆ ಮುಂಭಡ್ತಿ ನೀಡಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News