×
Ad

ಅಧಿಕಾರದ ಕೊನೆ ನಿಮಿಷದವರೆಗೂ ಕೆಲಸ ಮಾಡುತ್ತೇನೆ: ಸಿಎಂ ಬಿಎಸ್ ವೈ

Update: 2021-07-25 17:44 IST

ಬೆಂಗಳೂರು,ಜು.25: ಮುಖ್ಯಮಂತ್ರಿ ಬದಲಾವಣೆ ವಿಚಾರ, ರಾಜಕೀಯ ಬೆಳವಣಿಗೆಗಳ ನಡುವೆಯೇ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಮಳೆ, ಪ್ರವಾಹ ಪರಿಸ್ಥಿತಿ ಅವಲೋಕನ ನಡೆಸಲು ಬೆಳಗಾವಿಗೆ ಭೇಟಿ ನೀಡಿ ಮತ್ತೆ ಬೆಂಗಳೂರಿಗೆ ವಾಪಸ್ ಆಗಿದ್ದಾರೆ. 

ಈ ವೇಳೆ ನಗರದ ಕಾವೇರಿ ನಿವಾಸ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಬಿಎಸ್ ವೈ, ಇದು ವರೆಗೂ ಹೈ ಕಮಾಂಡ್ ನಿಂದ ಯಾವುದೇ ಸಂದೇಶ ಬಂದಿಲ್ಲ. ಮುಖ್ಯಮಂತ್ರಿಯ ಅಧಿಕಾರ ಅವಧಿಯ ಕೊನೆಕ್ಷಣದವರೆಗೂ ಕೆಲಸ ಮಾಡುತ್ತೇನೆ ಎಂದು ಹೇಳಿದರು. 

ಕೇಂದ್ರದಿಂದ ಇದು ವರೆಗೂ ಯಾವುದೇ ಸಂದೇಶ ಬಂದಿಲ್ಲ, ಇವತ್ತು ರಾತ್ರಿ ಅಥವಾ ಬೆಳಗ್ಗೆ ಸಂದೇಶ ಬರುವ ನಿರೀಕ್ಷೆ ಇದೆ ಎಂದು ತಿಳಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News