ಶಿಕಾರಿಪುರದಲ್ಲಿ ಜಾತಿ ದೌರ್ಜನ್ಯದ ಆರೋಪ: ದೂರು ದಾಖಲು

Update: 2021-07-25 15:55 GMT

ಶಿವಮೊಗ್ಗ(25):  ಶಿಕಾರಿಪುರದ ಮಾಯತ್ತಮ್ಮನ ಮುಚ್ಚಡಿ ಗ್ರಾಮದಲ್ಲಿ ಪರಿಶಿಷ್ಟ ಜಾತಿ ಕುಟುಂಬಗಳ ಮೇಲೆ ದೌರ್ಜನ್ಯ ನಡೆಸಿದ 23 ಜನ ಸವರ್ಣಿಯರ ಮೇಲೆ ಶಿಕಾರಿಪುರ ಠಾಣೆಯಲ್ಲಿ ಅಟ್ರಾಸಿಟಿ ಪ್ರಕರಣ ದಾಖಲಾಗಿದೆ.

ಶಿಕಾರಿಪುರದಲ್ಲಿ ವ್ಯಾಪಕವಾಗಿ ಮಳೆಯಾಗಿದ್ದರಿಂದ ಇಲ್ಲಿನ ಮಾಯತ್ತಮ್ಮ ಮುಚ್ಚಡಿ ಗ್ರಾಮದ ಪರಿಶಿಷ್ಟ ಜಾತಿ ಸಮುದಾಯಗಳ ಕಾಲೋನಿ ಜಲಾವೃತಗೊಂಡಿದ್ದು,ಹಲವು ಮನೆಗಳಿಗೆ ನೀರು ನುಗ್ಗಿ ಸಾಮಾನುಗಳು ನೀರು ಪಾಲಾಗಿ ಕೇರಿಯ ಜನರು ಪರದಾಡುವಂತಾಗಿತ್ತು.
ಮನೆಯೊಳಗಿದ್ದ ನೀರನ್ನು ಹೊರ ಹಾಕಲು ಗ್ರಾಮ ಪಂಚಾಯತ್ ಪಿಡಿಒ ಮತ್ತು ಸದಸ್ಯರ ಅನುಮತಿ ಪಡೆದು ಪರಿಶಿಷ್ಟ ಕಾಲೋನಿಯ ಯುವಕರು ಕಾಲುವೆ ತೆಗೆದಿದ್ದು ಗ್ರಾಮದ ಲಿಂಗಾಯತ ಸಮುದಾಯದವರ ಕೆಂಗಣ್ಣಿಗೆ ಗುರಿಯಾಗಿದೆ.ಲಿಂಗಾಯತ ಸಮುದಾಯದ ಮಲ್ಲೇಶಪ್ಪ,ಬಸವರಾಜಪ್ಪ ನೇತೃತ್ವದಲ್ಲಿ 50-60 ಜನ ಗುಂಪು ಕಟ್ಟಿಕೊಂಡು ಕಾಲುವೆ ತೆಗೆಯಲು ಅಡ್ಡಿಪಡಿಸಿದ್ದಾರೆ.ಅಲ್ಲದೇ ಜೀವ ಬೆದರಿಕೆ ಹಾಕಿದ್ದಾರೆಂದು ದಲಿತ ಕಾಲೋನಿಯ ವಿರೇಶ್ ಎನ್ನುವವರು ದೂರು‌ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News