×
Ad

ಮಡಿಕೇರಿ : ಗುಮ್ಮನಕೊಲ್ಲಿಯಲ್ಲಿ ಮಳೆಯಿಂದ ಮನೆಗೆ ಹಾನಿ

Update: 2021-07-25 22:25 IST

ಮಡಿಕೇರಿ ಜು.25 : ಮುಳ್ಳುಸೋಗೆ ಗ್ರಾ.ಪಂ ವ್ಯಾಪ್ತಿಯ ಗುಮ್ಮನಕೊಲ್ಲಿಯಲ್ಲಿ ತೀವ್ರ ಮಳೆಯಿಂದ ಮನೆಗೋಡೆಗಳು ಕುಸಿದು ಬಿದ್ದ ಘಟನೆ ನಡೆದಿದೆ. 

ಹಾರಂಗಿ ರಸ್ತೆಯ ಅಗ್ನಿಶಾಮಕ ದಳ ಕಚೇರಿ ಬಳಿ ಇರುವ ಕನಕಮ್ಮ ಎಂಬುವವರ ಮನೆಯ ಗೋಡೆಗಳು ಕುಸಿದು ಬಿದ್ದಿದೆ. ಮನೆಯಲ್ಲಿದ್ದ ಸಾಮಾಗ್ರಿಗಳು ಜಖಂ ಗೊಂಡಿದ್ದು, ನಿವಾಸಿಗಳು ಅಪಾಯದಿಂದ ಪಾರಾಗಿದ್ದಾರೆ. 

ಸ್ಥಳಕ್ಕೆ ಮುಳ್ಳುಸೋಗೆ ಗ್ರಾ.ಪಂ ಸದಸ್ಯರಾದ ಮಣಿ ಹಾಗೂ ಆಸಿಫ್.ಸಿ.ಎಂ ಭೇಟಿ ನೀಡಿ ಪರಿಶೀಲನೆ ನಡೆಸಿದರು. ನಂತರ ಕಂದಾಯ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ನೀಡಿದರು. ಗ್ರಾಮ ಲೆಕ್ಕಿಗ ಗೌತಮ್ ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News