ರಾಜ್ಯದಲ್ಲಿಂದು 1,001 ಮಂದಿಗೆ ಕೊರೋನ ದೃಢ, 22 ಮಂದಿ ಸಾವು

Update: 2021-07-25 17:17 GMT

ಬೆಂಗಳೂರು, ಜು.25: ರಾಜ್ಯದಲ್ಲಿ ರವಿವಾರ 1,001 ಹೊಸ ಕೊರೋನ ಪ್ರಕರಣಗಳು ದೃಢವಾಗಿವೆ. 22 ಜನರು ಸೋಂಕಿಗೆ ಬಲಿಯಾಗಿದ್ದು, 1,465 ಜನರು ಗುಣಮುಖರಾಗಿದ್ದಾರೆ.

ರಾಜ್ಯದಲ್ಲಿ ಈಗಾಗಲೇ ಒಟ್ಟು ಸೋಂಕಿತರ ಸಂಖ್ಯೆ 28,94,557ಕ್ಕೆ ತಲುಪಿದೆ. ಇಲ್ಲಿಯವರೆಗೆ ಒಟ್ಟು ಸಾವಿನ ಸಂಖ್ಯೆ 36,374ಕ್ಕೆ ತಲುಪಿದೆ. 
ಒಟ್ಟು ಸಕ್ರಿಯ ಕೊರೋನ ಪ್ರಕರಣ ಸಂಖ್ಯೆ 23,419ಕ್ಕೆ ಏರಿಕೆಯಾಗಿದ್ದು, ಇವರೆಲ್ಲ ಸೋಂಕಿತರು ಆಸ್ಪತ್ರೆ, ಕೊರೋನ ಕೇರ್ ಸೆಂಟರ್ ಹಾಗೂ ಮನೆಗಳಲ್ಲಿ ಚಿಕಿತ್ಸೆ ಮತ್ತು ಆರೈಕೆಯಲ್ಲಿದ್ದಾರೆ.

22 ಸೋಂಕಿತರು ಬಲಿ: ಬೆಳಗಾವಿ 2, ಬೆಂಗಳೂರು ನಗರ 3, ಬೀದರ್ 1, ಚಿಕ್ಕಬಳ್ಳಾಪುರ 1, ಚಿಕ್ಕಮಗಳೂರು 1, ದಕ್ಷಿಣ ಕನ್ನಡ 1, ಹಾಸನ 2, ಹಾವೇರಿ 2, ಕೊಡಗು 1, ಕೋಲಾರ 2, ಮಂಡ್ಯ 1, ಮೈಸೂರು 2, ಶಿವಮೊಗ್ಗ 1, ತುಮಕೂರು 1, ವಿಜಯಪುರ ಜಿಲ್ಲೆಯಲ್ಲಿ ಒಬ್ಬರು ಸಾವನ್ನಪ್ಪಿದ್ದಾರೆ. 

ಎಲ್ಲೆಲ್ಲಿ ಎಷ್ಟು: ರಾಜ್ಯದಲ್ಲಿ ಹೊಸದಾಗಿ 1,001 ಪ್ರಕರಣಗಳು ದೃಢವಾಗಿದ್ದು, ಅದರಲ್ಲಿ ಬಳ್ಳಾರಿ 6, ಬೆಳಗಾವಿ 10, ಬೆಂಗಳೂರು ಗ್ರಾಮಾಂತರ 14, ಬೆಂಗಳೂರು ನಗರ 165, ಬೀದರ್ 1, ಚಾಮರಾಜನಗರ 5, ಚಿಕ್ಕಬಳ್ಳಾಪುರ 10, ಚಿಕ್ಕಮಗಳೂರು 62, ಚಿತ್ರದುರ್ಗ 15, ದಕ್ಷಿಣ ಕನ್ನಡ 115, ದಾವಣಗೆರೆ 1, ಧಾರವಾಡ 6, ಗದಗ 5, ಹಾಸನ 90, ಹಾವೇರಿ 4, ಕಲಬುರಗಿ 4, ಕೊಡಗು 63, ಕೋಲಾರ 25, ಕೊಪ್ಪಳ 2, ಮಂಡ್ಯ 35, ಮೈಸೂರು 97, ರಾಮನಗರ 7, ಶಿವಮೊಗ್ಗ 51, ತುಮಕೂರು 42, ಉಡುಪಿ 110, ಉತ್ತರ ಕನ್ನಡ 54, ವಿಜಯಪುರ 1, ಯಾದಗಿರಿ ಜಿಲ್ಲೆಯಲ್ಲಿ 1 ಪ್ರಕರಣ ಪತ್ತೆಯಾಗಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News