ಐಪಿಎಸ್ ಅಧಿಕಾರಿ ಚನ್ನಣ್ಣನವರ್ ಸಹೋದರನ ಹೆಸರಿನಲ್ಲಿ ವಂಚನೆ: ಆರೋಪ

Update: 2021-07-26 16:01 GMT

ಬೆಂಗಳೂರು, ಜು.26: ಐಪಿಎಸ್ ಅಧಿಕಾರಿ ರವಿ ಡಿ.ಚನ್ನಣ್ಣನವರ್ ಅವರ ಸಹೋದರ ಹೇಳಿಕೊಂಡು ಮನೆ ಕೊಡಿಸುವ ಹೆಸರಿನಲ್ಲಿ ವಂಚನೆ ಮಾಡಿರುವ ಪ್ರಕರಣವೊಂದು ಬೆಳಕಿಗೆ ಬಂದಿದೆ.

ನಗರದ ಉತ್ತರಹಳ್ಳಿಯ ಮಂಜುನಾಥ್ ಯಾನೆ ಅರ್ಚಕ ಎಂಬಾತ ಈ ಕೃತ್ಯವೆಸಗಿರುವ ಆರೋಪ ಕೇಳಿಬಂದಿದೆ.

ಮಂಜುನಾಥ್ ಹಲವರಿಗೆ ಆಶ್ರಯ ಯೋಜನೆಯಲ್ಲಿ ಮನೆ ಕೊಡಿಸುವ ಭರವಸೆ ನೀಡಿ, ಲಕ್ಷಾಂತರ ರೂ.ಗಳನ್ನು ಪಡೆದು ವಂಚಿಸಿ ಪರಾರಿಯಾಗಿದ್ದಾನೆ. ಈ ಹಿಂದೆ ಉತ್ತರಹಳ್ಳಿಯ ಆಂಜನೇಯ ದೇಗುಲದಲ್ಲಿ ಪೂಜೆ ಮಾಡುತ್ತಿದ್ದ ಮಂಜುನಾಥ್, ದೇವಾಲಯಕ್ಕೆ ಬರುತ್ತಿದ್ದ ಭಕ್ತರಿಗೆ ಮನೆ ಕೊಡಿಸುವುದಾಗಿ ತಲಾ 1.5 ಲಕ್ಷವರೆಗೆ ಹಣ ಪಡೆದಿದ್ದ ಎನ್ನಲಾಗಿದೆ.

ಇನ್ನು, ಸಭೆ ಸಮಾರಂಭಗಳಲ್ಲಿ ರಾಜ್ಯದ ಪ್ರಭಾವಿ ರಾಜಕಾರಣಿಗಳು, ಐಪಿಎಸ್ ಅಧಿಕಾರಿಗಳು, ಗಣ್ಯರ ಜೊತೆ ಫೋಟೋ ತೆಗೆದುಕೊಂಡು ಅವರೆಲ್ಲ ಪರಿಚಯವಿದೆ ಎನ್ನುತ್ತಿದ್ದ. ಅಲ್ಲದೇ ಐಪಿಎಸ್ ಅಧಿಕಾರಿ ರವಿ ಡಿ.ಚನ್ನಣ್ಣನವರ್ ಸ್ವಂತ ಸಹೋದರ ಎಂದು ಹೇಳಿಕೊಂಡು ಅವರ ಜೊತೆಗಿನ ಫೋಟೋ ತೋರಿಸಿ ವಂಚಿಸುತ್ತಿದ್ದ ಎಂದು ಹೇಳಲಾಗುತ್ತಿದ್ದು, ಈ ಸಂಬಂಧ ಸುಬ್ರಹ್ಮಣ್ಯಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News