ಬೀದರ್: ತಹಶೀಲ್ದಾರ್ ಎಸಿಬಿ ಬಲೆಗೆ
Update: 2021-07-28 19:50 IST
ಬೀದರ್, ಜು.28: ಜಮೀನು ಖಾತೆ ಬದಲಾವಣೆ ಸಂಬಂಧ ಬರೋಬ್ಬರಿ 15 ಲಕ್ಷ ರೂ. ಲಂಚಕ್ಕೆ ಬೇಡಿಕೆಯಿಟ್ಟಿದ್ದ ಆರೋಪದಲ್ಲಿ ತಹಶೀಲ್ದಾರ್ ಒಬ್ಬರು ಎಸಿಬಿ ಬಲೆಗೆ ಬಿದಿದ್ದಾರೆ.
ಬೀದರ್ ತಹಶೀಲ್ದಾರ್ ಗಂಗಾದೇವಿ ವಿರುದ್ಧ ಎಸಿಬಿ ಮೊಕದ್ದಮೆ ದಾಖಲಿಸಿದೆ.
ನಗರದ ಚಿದ್ರಿ ಸರ್ವೇ ಸಂಖ್ಯೆ 15ರ ಭೂಮಿ ಮುಟೆಷನ್ ಮಾಡಲು ಲೀಲಾಧರ್ ಎನ್ನುವವರಿಂದ 20 ಲಕ್ಷ ರೂ.ಬೇಡಿಕೆ ಇಟ್ಟಿದ್ದರು. ಈ ಸಂಬಂಧ ದಾಖಲಾದ ದೂರಿನನ್ವಯ ಎಸಿಬಿ ಕಲಬುರ್ಗಿ ಎಸ್ಪಿ ಮಹೇಶ ಮೇಘಣ್ಣವರ್ ಮಾರ್ಗದರ್ಶನದಲ್ಲಿ ಬೀದರ್ ಎಸಿಬಿ ಡಿಎಸ್ಪಿ ಹಣಮಂತರಾಯ ನೇತೃತ್ವದ ತಂಡ ದಾಳಿ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.
ಗಂಗಾದೇವಿ ಮುಂಗಡ 15 ಲಕ್ಷ ಪಡೆಯುವಾಗ ಸಿಕ್ಕಿಬಿದಿದ್ದಾರೆ. ಸದ್ಯ ವಿಚಾರಣೆ ಮುಂದುವರಿದಿದೆ ಎಂದು ಎಸಿಬಿ ತಿಳಿಸಿದೆ.