ಕನ್ನಡ ಸಾಹಿತ್ಯ ಪರಿಷತ್ ದತ್ತಿ ಪ್ರಶಸ್ತಿಗೆ ಕೃತಿಗಳ ಆಯ್ಕೆ

Update: 2021-07-30 18:22 GMT

ಬೆಂಗಳೂರು, ಜು.30: ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ 2020ನೆ ಸಾಲಿನ ವಿವಿಧ ದತ್ತಿ ಪ್ರಶಸ್ತಿಗಳಿಗೆ ಡಾ.ಎಸ್.ಪಿ.ಯೋಗಣ್ಣ, ಡಾ.ವಾಸುದೇವ ಬಡಿಗೇರ ಸೇರಿ ಹಲವು ಲೇಖಕರ ಕೃತಿಗಳನ್ನು ಆಯ್ಕೆ ಮಾಡಲಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್‍ನ ಗೌರವ ಕಾರ್ಯದರ್ಶಿ ಕೆ.ರಾಜಕುಮಾರ್ ತಿಳಿಸಿದ್ದಾರೆ. 

ಆಯ್ಕೆಯಾದ ಲೇಖಕರು: ಡಾ.ಎಸ್.ಪಿ.ಯೋಗಣ್ಣರವರ ಆರೋಗ್ಯ ಎಂದರೇನು?, ಡಾ.ವಾಸುದೇವ ಬಡಿಗೇರ(ದೆವರ ದಾಸಿಮಯ್ಯ-ಮರುಚಿಂತನೆ), ಓ.ಎಲ್.ನಾಗಭೂಷಣಸ್ವಾಮಿ(ಕೆಂಪು ಮುಡಿಯ ಹೆಣ್ಣು), ಎಸ್.ಬಿ.ಮುನ್ನೊಳ್ಳಿ(ದಶರತ್ನಗಳು), ಪ್ರೊ.ಜೀವಂಧರಕುಮಾರ್ ಹೋತಪೇಟೆ(ವಿದೇಶಗಳಲ್ಲಿ ಜೈನ ಧರ್ಮ), ಅಮರೇಶ ನುಗಡೋಣಿ(ದಂದುಗ). 

ಶರತ್ ಕಲ್ಕೋಡ್(ಶಿಸ್ತು ಮತ್ತು ಇತರ ಕಥೆಗಳು), ಜೀನಹಳ್ಳಿ ಸಿದ್ಧಲಿಂಗಪ್ಪ(ಅಮ್ಮ ಮತ್ತು ಮೇಡಂ), ಡಾ.ಅಶೋಕ ನರೋಡೆ(ಬಂಡಾಯ ಸಾಹಿತ್ಯದ ವಿಭಿನ್ನ ನೆಲೆಗಳು), ಎನ್.ರಾಮನಾಥ್(ನಿದ್ರಾಂಗನೆಯ ಸೆಳವಿನಲ್ಲಿ), ಡಾ.ಎಚ್.ಎಸ್.ಅನುಪಮ(ಮುಟ್ಟು), ಜಿ.ಎಸ್.ಭಟ್ಟ ಸಾಗರ(ಮಂಜೀ ಮಹದೇವನ ಗಂಜೀ ಪುರಾಣ), ಶಾಂತಿ ಕೆ. ಅಪ್ಪಣ್ಣ ಅವರ ಮನಸು ಅಭಿಸಾರಿಕೆ ಕೃತಿ ಸೇರಿ ಹಲವು ಲೇಖಕರ ಕೃತಿಗಳು ದತ್ತಿ ಪ್ರಶಸ್ತಿಗೆ ಆಯ್ಕೆ ಆಗಿವೆ ಎಂದು ಪ್ರಕಟನೆಯಲ್ಲಿ ತಿಳಿಸಲಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News