ಅನಾಥ ಯುವತಿಯನ್ನು ಸಾಕಿ ಹಿಂದೂ ಸಂಪ್ರದಾಯದಂತೆ ಮದುವೆ ಮಾಡಿಸಿದ ಮಹಿಬೂಬ ಮಸಳಿ

Update: 2021-07-31 17:38 GMT

ವಿಜಯಪುರ: ಅನಾಥ ಹಿಂದೂ ಯುವತಿಯನ್ನು ಸುಮಾರು 10 ವರ್ಷದಿಂದ ಸಾಕಿ ಈಗ ಹಿಂದೂ ಸಂಪ್ರದಾಯದಂತೆ ತನ್ನ ಮನೆಯಲ್ಲಿಯೇ ಮದುವೆ ಮಾಡಿ ಗಂಡನ ಮನೆಗೆ ಕಳಿಸಿಕೊಡುವ ಮೂಲಕ ಮುಸ್ಲಿಂ ಮುಖಂಡ ಮಹಿಬೂಬ ಮಸಳಿ ಎಂಬವರು ಮಾದರಿಯಾಗಿದ್ದಾರೆ.

ಆಲಮೇಲ ಪಟ್ಟಣದ ಮಹಿಬೂಬ ಮಸಳಿ ಅವರು, ಪೂಜಾ ಶೇಖರ ವಡಿಗೇರಿ ಎಂಬ ಅನಾಥ ಯುವತಿಗೆ ತನ್ನ ಮನೆಯಲ್ಲಿಯೇ ಆಶ್ರಯ ನೀಡಿದ್ದರು. ಜುಲೈ 30 ರಂದು ಯುವತಿಯ ಜಾತಿಗೆ ಸೇರಿದ ಹುಡುಗನೊಂದಿಗೆ ಹಿಂದೂ ಸಂಪ್ರದಾಯದಂತೆ ತಮ್ಮ ಮನೆಯಲ್ಲಿಯೇ ಎಲ್ಲಾ ಕಾರ್ಯಕ್ರಮಗಳು ಮಾಡಿ ಮದುವೆ ಮಾಡಿಕೊಟ್ಟು ಸೌಹಾರ್ದ ಮೆರೆದಿದ್ದಾರೆ.

ವದು ಪೂಜಾ ತಂದೆ ಹಾಗೂ ತಾಯಿ ಸುಮಾರು 10 ವರ್ಷದ ಹಿಂದೆ ಅಗಲಿದ್ದಾರೆ. ನಂತರ ಅಜ್ಜಿಯನ್ನೂ ಕಳೆದುಕೊಂಡಿದ್ದಳು.

ಸುಮಾರು ಹತ್ತುವರ್ಷದಿಂದ ತಮ್ಮ ಮನೆಯಲ್ಲಿ ಮಗಳ ಹಾಗೆ ಸಾಕಿ ನನಗೆ ಮದುವೆ ಮಾಡಿ ಕೊಡುತ್ತಿರುವ ಇವರು ನನ್ನ ಪಾಲಿಗೆ ದೇವರಿದ್ದ ಹಾಗೆ. ಈಗಿನ ಕಾಲದಲ್ಲಿ ತಮ್ಮ ಹೆಣ್ಣು ಮಕ್ಕಳನ್ನು ಸರಿಯಾಗಿ ನೋಡಿಕೊಳ್ಳದ ಜನರ ನಡುವೆ ಇವರು ನನ್ನನ್ನು ಸ್ವಂತ ಮಗಳ ಹಾಗೆ ನೋಡಿಕೊಂಡಿದ್ದಾರೆ. ಇವರು ಎಲ್ಲರಿಗೂ ಮಾದರಿ.
-ಪೂಜಾ ವಡಿಗೇರಿ, ಮದುಮಗಳು

ನನಗೆ ಯಾವುದೇ ಜಾತಿ, ಧರ್ಮ ಮುಖ್ಯ ಅಲ್ಲ. ಜೀವನದ ಅವಧಿಯಲ್ಲಿ ಏನು ಮಾಡಿದ್ದೇವೆ ಎನ್ನುವುದು ಮುಖ್ಯ. ಈಕೆಯೂ ನನ್ನ ಮಗಳು ಎಂದು ತಿಳಿದು ಎಲ್ಲಾ ರೀತಿಯಲ್ಲಿ ಸಹಾಯ ಮಾಡಿದ್ದೆನೆ. ಅವರ ಸಂಪ್ರದಾಯದಂತೆ ನನ್ನ ಮನೆಯಲ್ಲಿ ಮದುವೆ ಮಾಡಿಕೊಟ್ಟಿದ್ದೇನೆ. 
ಮಹಿಬೂಬ ಮಸಳಿ, ಮುಸ್ಲಿಂ ಮುಖಂಡ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News