ಕೆಎಸ್ಸಾರ್ಟಿಸಿ ಪ್ಯಾಕೇಜ್ ಪ್ರವಾಸ

Update: 2021-07-31 18:41 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಜು. 31: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ(ಕೆಎಸ್ಸಾರ್ಟಿಸಿ)ದ ವತಿಯಿಂದ ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ಜೋಗ ಜಲಪಾತ, ಗಗನ ಚುಕ್ಕಿ, ಭರಚುಕ್ಕಿ ಮತ್ತು ಹಂಪಿ ಮುಂತಾದ ಪ್ರೇಕ್ಷಣೀಯ ಸ್ಥಳಗಳಿಗೆ ಪ್ಯಾಕೇಜ್ ಪ್ರವಾಸಗಳನ್ನು ಪ್ರಾರಂಭಿಸಲಾಗಿದೆ.

ಪ್ಯಾಕೇಜ್ ಪ್ರವಾಸ ಒಳಗೊಂಡಿರುವ ಪ್ರೇಕ್ಷಣೀಯ ಸ್ಥಳಗಳ ವಿವರ, ಹೊರಡುವ ಸಮಯ, ಪ್ರಯಾಣದರ ವಿವರಗಳು: ದಾವಣಗೆರೆ-ಹರಿಹರ-ಸಿರಸಿ ಮೂಕಾಂಬಿಕ ದೇವಸ್ಥಾನ-ಜೋಗ್ ಜಲಪಾತ(1 ದಿನದ ಪ್ರವಾಸ): ರಾಜಹಂಸ, ಹೊರಡುವ ಸ್ಥಳ ದಾವಣಗೆರೆ ಮತ್ತು ಹರಿಹರ ಬಸ್ ನಿಲ್ದಾಣ ಪ್ರಯಾಣದರ ವಯಸ್ಕರಿಗೆ ಹೊರಡುವ ಸಮಯ ಬೆಳಗ್ಗೆ 7 ಗಂಟೆಗೆ 500 ರೂ., 7:30ಕ್ಕೆ 475 ರೂ., ಮಕ್ಕಳಿಗೆ 375 ರೂ., ಚಳ್ಳಕೆರೆ-ಚಿತ್ರದುರ್ಗ-ವರದಮೂಲ-ಇಕ್ಕೇರಿ-ಜೋಗ್ ಜಲಪಾತ(1 ದಿನದ ಪ್ರವಾಸ): ಕರ್ನಾಟಕ ಸಾರಿಗೆ ಚಳ್ಳಕೆರೆ ಮತ್ತು ಚಿತ್ರದುರ್ಗ ಬಸ್ ನಿಲ್ದಾಣ ಹೊರಡುವ ಸಮಯ ಬೆಳಗ್ಗೆ 6 ಗಂಟೆಗೆ ಪ್ರಯಾಣದರ ವಯಸ್ಕರಿಗೆ 500 ರೂ., 7ಗಂಟೆಗೆ 450 ರೂ., ಮಕ್ಕಳಿಗೆ 400 ರೂ., ತುಮಕೂರು-ವರದಮೂಲ-ಇಕ್ಕೇರಿ-ಜೋಗ್ ಜಲಪಾತ(1 ದಿನದ ಪ್ರವಾಸ): ಕರ್ನಾಟಕ ಸಾರಿಗೆ ಹೊರಡುವ ಸ್ಥಳ, ತುಮಕೂರು ಬಸ್ ನಿಲ್ದಾಣ ಹೊರಡುವ ಸಮಯ ಬೆಳಗ್ಗೆ 6 ಗಂಟೆಗೆ ಪ್ರಯಾಣದರ ವಯಸ್ಕರಿಗೆ ರೂ.650, ಮಕ್ಕಳಿಗೆ ರೂ.400, ಹಾಸನ-ಜೋಗ್ ಜಲಪಾತ (1 ದಿನದ ಪ್ರವಾಸ): ಕರ್ನಾಟಕ ಸಾರಿಗೆ ಹೊರಡುವ ಸ್ಥಳ ಹಾಸನ ಬಸ್ ನಿಲ್ದಾಣ ಹೊರಡುವ ಸಮಯ 5:30ಕ್ಕೆ ಪ್ರಯಾಣ ದರ ವಯಸ್ಕರಿಗೆ ರೂ.550, ಮಕ್ಕಳಿಗೆ ರೂ.300, ಚಾಮರಾಜನಗರ-ವರದಹಳ್ಳಿ-ವರದಮೂಲ-ಇಕ್ಕೇರಿ-ಕೆಳದಿ-ಜೋಗ್ ಜಲಪಾತ (1 ದಿನದ ಪ್ರವಾಸ): ಕರ್ನಾಟಕ ಸಾರಿಗೆ ಹೊರಡುವ ಸ್ಥಳ ಚಾಮರಾಜನಗರ ಬಸ್ ನಿಲ್ದಾಣ ಹೊರಡುವ ಸಮಯ 20:30 ಗಂಟೆಗೆ ಪ್ರಯಾಣದರ ವಯಸ್ಕರಿಗೆ ರೂ.900, ಮಕ್ಕಳಿಗೆ ರೂ.500ಗಳು ಎಂದು ತಿಳಿಸಲಾಗಿದೆ.

ಮುಂಗಡ ಆಸನಗಳನ್ನು ಕಾಯ್ದಿರಿಸಲು ವೆಬ್‍ಸೈಟ್ ವಿಳಾಸ: ksrtc.karnataka.gov.in/www.ksrtc.in ಮತ್ತು ನಿಗಮದ ಫ್ರಾಂಚೈಸಿ ಕೌಂಟರ್‍ಗಳ ಮೂಲಕವೂ ಪ್ರಯಾಣಿಕರು ಪ್ಯಾಕೇಜ್ ಪ್ರವಾಸದ ಸೌಲಭ್ಯ ಸದುಪಯೋಗ ಪಡೆದುಕೊಳ್ಳಬಹುದು.

ಹೆಚ್ಚಿನ ಮಾಹಿತಿಗಾಗಿ ನಿಗಮದ ಕಾಲ್‍ಸೆಂಟರ್ ದೂರವಾಣಿ ಸಂಖ್ಯೆ 080-2625 2625 ಅನ್ನು ಸಂಪರ್ಕಿಸ ಬಹುದಾಗಿದೆ. ಪ್ರಯಾಣಿಕರು ಕಡ್ಡಾಯವಾಗಿ ಮುಖಗವಸು ಧರಿಸುವುದು. ನಿಗಮದ ಬಸ್ಸುಗಳಲ್ಲಿ ಪ್ರಯಾಣಿಸುವಾಗ ಕೋವಿಡ್-19 ಮಾರ್ಗಸೂಚಿಗಳನ್ನು ಪಾಲಿಸಬೇಕು ಎಂದು ಕೆಎಸ್ಸಾರ್ಟಿಸಿ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News