ಸಚಿವ ಸ್ಥಾನಕ್ಕಾಗಿ ಕ್ಷೇತ್ರ ಮರೆತ ಬಿಜೆಪಿ ಶಾಸಕರು: ಸಿದ್ದರಾಮಯ್ಯ ಆರೋಪ

Update: 2021-08-01 15:58 GMT

ಹುಬ್ಬಳ್ಳಿ, ಆ. 1: `ರಾಜ್ಯದಲ್ಲಿ ವಿವಿಧ ಜಿಲ್ಲೆಗಳಲ್ಲಿ ಭಾರೀ ಮಳೆ ಮತ್ತು ಪ್ರವಾಹ ಪರಿಸ್ಥಿತಿಯ ಸಂದರ್ಭದಲ್ಲೂ ಆಡಳಿತಾರೂಢ ಬಿಜೆಪಿ ಶಾಸಕರು ತಮ್ಮ ಕ್ಷೇತ್ರವನ್ನು ಮರೆತು ಸಚಿವ ಸ್ಥಾನಕ್ಕಾಗಿ ಬೆಂಗಳೂರು, ದಿಲ್ಲಿಯಲ್ಲಿ ಕಚ್ಚಾಟವಾಡುತ್ತಿದ್ದಾರೆ' ಎಂದು ವಿರೋಧ ಪಕ್ಷದ ಸದಸ್ಯ ಸಿದ್ದರಾಮಯ್ಯ  ಆರೋಪಿಸಿದ್ದಾರೆ.

ರವಿವಾರ ಇಲ್ಲಿನ ನಗರದ ವಿಮಾನ ನಿಲ್ದಾಣದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, `ರಾಜ್ಯದಲ್ಲಿ ಪ್ರವಾಹ ಪರಿಸ್ಥಿತಿಯ ತುರ್ತು ಸಂದರ್ಭದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೊಬ್ಬರೆ ಎಲ್ಲವನ್ನು ನಿಭಾಯಿಸಲು ಸಾಧ್ಯವಿಲ್ಲ. ಕೂಡಲೇ ಸಂಪುಟ ರಚನೆಯಾಗಬೇಕು' ಎಂದು ಇದೇ ಸಂದರ್ಭದಲ್ಲಿ ಸಲಹೆ ಮಾಡಿದರು.

`ಕೊರೋನ ಮೊದಲ ಹಾಗೂ ಎರಡನೆ ಅಲೆ ನಿಯಂತ್ರಿಸುವಲ್ಲೂ ಬಿಜೆಪಿ ಸರಕಾರ ವಿಫಲವಾಗಿದೆ. ಇದೀಗ ಮೂರನೆ ಅಲೆಯ ಭೀತಿ ಆವರಿಸಿದೆ. ಅದನ್ನು ನಿಯಂತ್ರಿಸಲಾದರೂ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು. ನೆರೆಯ ಕೇರಳ, ಮಹಾರಾಷ್ಟ್ರ ಸೇರಿದಂತೆ ಹಲವು ರಾಜ್ಯಗಳ ಗಡಿ ಪ್ರದೇಶದಲ್ಲಿ ಕಟ್ಟೆಚ್ಚರ ವಹಿಸಬೇಕು ಎಂದು ಸಿದ್ದರಾಮಯ್ಯ ಸೂಚಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News