×
Ad

ಸೀತಾರಾಂ ಕೇಸರಿಯವರನ್ನು ಶೌಚಾಲಯದಲ್ಲಿ ಕೂಡಿ ಹಾಕಿದ್ದು ಗೌರವವೇ: ಬಿಜೆಪಿ ಪ್ರಶ್ನೆ

Update: 2021-08-01 20:31 IST

ಬೆಂಗಳೂರು, ಆ. 1: `ಸೀತಾರಾಂ ಕೇಸರಿಯವರನ್ನು ಶೌಚಾಲಯದಲ್ಲಿ ಕೂಡಿ ಹಾಕಿದ್ದು, ಪಿ.ವಿ.ನರಸಿಂಹರಾವ್ ಪಾರ್ಥಿವ ಶರೀರಕ್ಕೆ ಪಕ್ಷದ ಕಚೇರಿಯಲ್ಲಿ ಗೌರವ ಸಲ್ಲಿಕೆಗೆ ಅವಕಾಶ ತಪ್ಪಿಸಿದ್ದು ಯಾವ ರೀತಿಯ ಗೌರವ!? ಕಾಂಗ್ರೆಸ್ ಪಕ್ಷ ಹಿರಿಯರಿಗೆ ಕೊಡುವ ಗೌರವದ ಪರಿ ಇದೆಯೇ!?' ಬಿಜೆಪಿ, ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದೆ.

ರವಿವಾರ ಸರಣಿ ಟ್ವೀಟ್ ಮಾಡಿರುವ ಬಿಜೆಪಿ, `ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರನ್ನು ಎರಡೆರಡು ಬಾರಿ ಸೋಲಿಸಿದ್ದು ಕಾಂಗ್ರೆಸ್ ಎಂಬುದನ್ನು ದೇಶದ ಜನರು ಮರೆತಿಲ್ಲ. ಹಿರಿಯ ನಾಯಕ, ದಲಿತ ಮುತ್ಸದ್ಧಿಯೊಬ್ಬರಿಗೆ ಕಾಂಗ್ರೆಸ್ ಪಕ್ಷ ನೀಡಿದ ಗೌರವದ ಪರಿ ಇದೇನಾ!?' ಎಂದು ಪ್ರಶ್ನಿಸಿದ್ದಾರೆ.

`ಬಿಜೆಪಿಯಲ್ಲಿ ಹಿರಿಯರಿಗೆ ಬೆಲೆ ಇಲ್ಲ ಎಂದು ಹೇಳಿಕೆ ನೀಡಿರುವ ರಣದೀಪ್ ಸಿಂಗ್ ಸುರ್ಜೆವಾಲ ಅವರು ಕಾಂಗ್ರೆಸ್ ಇತಿಹಾಸ ಮರೆತಂತೆ ಕಾಣುತ್ತದೆ. ಗಾಂಧಿ ಕುಟುಂಬದ ಏಳಿಗೆಗಾಗಿ ನೀವು ಅಪಮಾನಿಸಿದ ನಾಯಕರ ಪಟ್ಟಿ ಕೊಡಬೇಕೇ, ಮಿ.ಸುರ್ಜೇವಾಲ!?' ಎಂದು ಬಿಜೆಪಿ ಲೇವಡಿ ಮಾಡಿದೆ.

`ರಾಜ್ಯದಲ್ಲಿ ಮಳೆಯಿಂದಾದ ಅವಾಂತರಗಳು ಒಂದೆರಡಲ್ಲ, ಬೆಳೆ, ಮನೆ, ಬದುಕು ಕಳೆದುಕೊಂಡವರು ನಡು ನೀರಲ್ಲಿ ನಿಂತಿದ್ದಾರೆ. ಸರಕಾರವಿಲ್ಲ, ಸಚಿವರಿಲ್ಲ, ಜನ ಯಾರಲ್ಲಿ ತಮ್ಮ ಗೋಳು ಹೇಳಿಕೊಳ್ಳಬೇಕು? ಬಿಜೆಪಿ ಎಲ್ಲಿ ನಿಮ್ಮ ಸರಕಾರ? ಊರು ಮುಳುಗಿದರೆ ಶ್ಯಾನುಭೋಗನ ಗಡ್ಡಕ್ಕೇನು ಎಂಬಂತೆ ಬಿಜೆಪಿ ನಡೆದುಕೊಳ್ಳುತ್ತಿದೆ'

-ಡಿ.ಕೆ.ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News