ಆಸ್ತಿ ತೆರಿಗೆ ಪಾವತಿ: ಶೇ.5ರ ರಿಯಾಯಿತಿ ಕಾಲಾವಧಿ ಆ.31ರ ವರೆಗೆ ವಿಸ್ತರಣೆ

Update: 2021-08-02 17:28 GMT

ಬೆಂಗಳೂರು, ಆ. 2: ಕೋವಿಡ್ ಹಿನ್ನೆಲೆಯಲ್ಲಿ ಆರ್ಥಿಕ ಚಟುವಟಿಕೆಗಳು ಕುಂಠಿತವಾಗಿರುವ ಕಾರಣ ಹಾಗೂ ಸಾರ್ವಜನಿಕರ ಆರ್ಥಿಕ ಹಿತದೃಷ್ಟಿಯಿಂದ ನಗರ ಸ್ಥಳೀಯ ಸಂಸ್ಥೆಗಳು 2021-22ನೆ ಸಾಲಿನ ಆಸ್ತಿ ತೆರಿಗೆ ಪಾವತಿಗೆ ಶೇ.5ರಷ್ಟು ರಿಯಾಯಿತಿ ಕಾಲಾವಧಿಯನ್ನು ಆಗಸ್ಟ್ 1ರಿಂದ ಆಗಸ್ಟ್ 31ರ ವರೆಗೆ ವಿಸ್ತರಿಸಲಾಗಿದೆ.

ಆಸ್ತಿ ತೆರಿಗೆಯನ್ನು ಪಾವತಿಸದಿದ್ದಲ್ಲಿ ಜುಲೈ ತಿಂಗಳಿನಿಂದ ವಿಳಂಬದ ಅವಧಿಗೆ ವಿಧಿಸಲಾಗುವ ಮಾಸಿಕ ಶೇ.2ರಷ್ಟು ದಂಡದ ಕಾಲಾವಧಿಯನ್ನು ಆಗಸ್ಟ್ 1ರಿಂದ ಅನ್ವಯಿಸುವ ಬದಲು ಸೆಪ್ಟಂಬರ್ 1ರಿಂದ ಅನ್ವಯಿಸುವಂತೆ ಅಗತ್ಯ ಕ್ರಮ ಕೈಗೊಳ್ಳಲು ರಾಜ್ಯದ ಎಲ್ಲ ನಗರ ಸ್ಥಳೀಯ ಸಂಸ್ಥೆಗಳು/ಮಹಾನಗರ ಪಾಲಿಕೆ(ಬಿಬಿಎಂಪಿ ಹೊರತುಪಡಿಸಿ)ಗಳಿಗೆ ಸೂಚಿಸಿ ನಗರಾಭಿವೃದ್ಧಿ ಇಲಾಖೆ ಸರಕಾರದ ಅಧೀನ ಕಾರ್ಯದರ್ಶಿ ಲತಾ ಕೆ. ಸುತ್ತೋಲೆ ಹೊರಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News