ಸೋಮವಾರಪೇಟೆ: ಆತಂಕ ಮೂಡಿಸಿರುವ ಕಾಡಾನೆಗಳ ಹಿಂಡು; ತೋಟಗಳಲ್ಲಿ ದಾಂಧಲೆ

Update: 2021-08-03 17:49 GMT

ಸೋಮವಾರಪೇಟೆ ಆ.3 : ಸೋಮವಾರಪೇಟೆ ಸಮೀಪದ ತೋಳೂರು ಶೆಟ್ಟಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದೊಡ್ಡತೋಳೂರು ಗ್ರಾಮದಲ್ಲಿ ಕಾಡಾನೆಗಳ ಹಿಂಡು ಕಾಣಿಸಿಕೊಂಡಿದ್ದು, ಆತಂಕ ಸೃಷ್ಟಿ ಮಾಡಿದೆ.

ತಡ ರಾತ್ರಿ ಸುಮಾರು 5 ಕಾಡಾನೆಗಳು ತೋಟಗಳಿಗೆ ದಾಳಿ ಮಾಡಿ ಫಸಲನ್ನು ಧ್ವಂಸಗೊಳಿಸಿವೆ. ಡಿ.ಎಸ್.ವೀರಪ್ಪ, ತಿಲಕ್, ನವೀನ, ಕುಶಾಲಪ್ಪ ಅವರುಗಳ ತೋಟದಲ್ಲಿದ್ದ ಏಲಕ್ಕಿ, ಬಾಳೆ ಫಸಲು ಹಾಗೂ ಕಾಫಿ ಗಿಡಗಳನ್ನು ಹಾನಿಗೊಳಿಸಿವೆ.

ಕಾಡಾನೆಗಳು ಸಮೀಪದ ಯಸಳೂರು ಭಾಗದ ಅರಣ್ಯ ಪ್ರದೇಶದಿಂದ ಆಗಮಿಸುತ್ತಿದ್ದು, ಕೂತಿ, ಸಿಂಗನಳ್ಳಿ ತೋಳೂರುಶೆಟ್ಟಳ್ಳಿ ದೊಡ್ಡತೋಳೂರು ಭಾಗದಲ್ಲಿ ಕಳೆದ ಎರಡು ದಿನಗಳಿಂದ ಬೀಡು ಬಿಟ್ಟಿವೆ. ಗ್ರಾಮಸ್ಥರು ಭಯದಿಂದಲೇ ಗದ್ದೆ, ತೋಟದ ಕೆಲಸಕ್ಕೆ ತೆರಳುವಂತಾಗಿದೆ.

ಅರಣ್ಯಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಆನೆಗಳನ್ನು ಕಾಡಿಗಟ್ಟಲು ಕ್ರಮ ಕೈಗೊಳ್ಳಬೇಕು ಮತ್ತು ಆಗಿರುವ ಬೆಳೆ ನಷ್ಟಕ್ಕೆ ಪರಿಹಾರ ನೀಡಬೇಕೆಂದು ಬೆಳೆಗಾರರು ಒತ್ತಾಯಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News