ಯಾದಗಿರಿ: ಸೆಕ್ಯೂರಿಟಿ ಗಾರ್ಡ್ ಮೇಲೆ ಹಲ್ಲೆ; ಓರ್ವನ ಬಂಧನ

Update: 2021-08-04 13:58 GMT

ಯಾದಗಿರಿ: ಶಹಾಪೂರದ ಸರ್ಕಾರಿ ಆಸ್ಪತ್ರೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ  ಸೆಕ್ಯೂರಿಟಿ ಗಾರ್ಡ್ ಮೇಲೆ ತಂಡವೊಂದು ಏಕಾ ಏಕಿ ಹಲ್ಲೆ ನಡೆಸಿದ್ದು, ಘಟನೆಯ ದೃಶ್ಯ ಸಿಸಿಟಿಯಲ್ಲಿ ಸೆರೆಯಾಗಿದೆ. 

ಹಲ್ಲೆಗೊಳಗಾದ ಸೆಕ್ಯೂರಿಟಿ ಗಾರ್ಡ್ ಶಫೀಕ್ ಮೇಲೆ ಈ ಹಿಂದೆಯೂ ಇದೇ ತಂಡ ಹಲ್ಲೆ ನಡೆಸಿದೆ ಎನ್ನಲಾಗುತ್ತಿದ್ದು, ಇದೀಗ ಮಂಗಳವಾರ ಮತ್ತೆ ಆಸ್ಪತ್ರೆಗೆ ನುಗ್ಗಿ ಏಕಾ ಏಕಿ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. 

ಆಸ್ಪತ್ರೆಯ ಬೆಡ್ ಮೇಲೆ ಕುಳಿತಿದ್ದ ಸೆಕ್ಯೂರಿಟಿ ಗಾರ್ಡ್ ಮೇಲೆ ನಾಲ್ಕು ಮಂದಿಯ ತಂಡದಲ್ಲಿದ್ದ ಓರ್ವ ಹಲ್ಲೆ ನಡೆಸುತ್ತಿರುವುದು ಸಿಸಿಟಿವಿ ದೃಶ್ಯದಲ್ಲಿ ಕಾಣಿಸುತ್ತದೆ. 

ಆಸ್ಪತ್ರೆ ಸಿಬ್ಬಂದಿಗಳ ಪ್ರತಿಭಟನೆ:  ಇದರಿಂದ ಆಸ್ಪತ್ರೆಯ ಕಾರ್ಯನಿರತ ಸಿಬ್ಬಂದಿ ಆತಂಕಕ್ಕೊಳಗಾಗಿದ್ದು, ಸೂಕ್ತ ಭದ್ರತೆ ಮತ್ತು ಹಲ್ಲೆ ನಡೆಸಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News