ಕೋತಿಗಳ ಕಾಟ: ಬೆಂಗಳೂರಿನಲ್ಲಿ 56 ಪ್ರಕರಣ ದಾಖಲು; ಸರಕಾರದಿಂದ ಹೈಕೋರ್ಟ್‍ಗೆ ವರದಿ ಸಲ್ಲಿಕೆ

Update: 2021-08-04 17:53 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಜು.4: ಬೆಂಗಳೂರು ನಗರದಲ್ಲಿ 2018ರಿಂದ ಈವರೆಗೆ ಕೋತಿಗಳಿಂದ ಜನ ಸಾಮಾನ್ಯರು ತೊಂದರೆಗೆ ಒಳಗಾದ 56 ಪ್ರಕರಣಗಳು ದಾಖಲಾಗಿರುವ ಕುರಿತು ರಾಜ್ಯ ಸರಕಾರ ಹೈಕೋರ್ಟ್‍ಗೆ ವರದಿ ಸಲ್ಲಿಸಿದೆ.

ಬೆಂಗಳೂರು ನಗರ ಜಿಲ್ಲೆಯ ಜನರಿಗೆ ಮಂಗಗಳ ಕಾಟದ ಕುರಿತು ಸಲ್ಲಿಸಿದ್ದ ಅರ್ಜಿ ವಿಚಾರಣೆ ಹೈಕೋರ್ಟ್‍ನಲ್ಲಿ ನಡೆಯಿತು. 
ಸ್ಥಳೀಯ ಆಡಳಿತ ಸಂಸ್ಥೆಗಳು ಹಾಗೂ ಅರಣ್ಯ ಇಲಾಖೆ ಜನರಿಗೆ ತೊಂದರೆ ಕೊಡುವ ಮಂಗಗಳ ಮೇಲೆ ಕ್ರಮ ಜರುಗಿಸಬೇಕು. ಒಂದು ಪ್ರಾಂತ್ಯದಿಂದ ಮತ್ತೊಂದು ಪ್ರಾಂತ್ಯಕ್ಕೆ ಬರುವ ಮಂಗಗಳನ್ನು ಸ್ಥಳೀಯ ಮಂಗಗಳು ಬಿಟ್ಟು ಕೊಡುವುದಿಲ್ಲ ಎಂದು ರಾಜ್ಯ ಸರಕಾರ ಸಲ್ಲಿಸಿದ ತನ್ನ ವರದಿಯಲ್ಲಿ ತಿಳಿಸಿದೆ. 

ಕೋತಿಗಳ ಕೂಡ ತನ್ನ ಪ್ರಾಂತ್ಯವನ್ನು ಗುರುತಿಸಿಕೊಂಡಿರುತ್ತವೆ. ಅಪ್ಪಿ ತಪ್ಪಿ ಗಡಿ ದಾಡಿದರೆ ಇತರೆ ಮಂಗಗಳು ಸಹಿಸುವುದಿಲ್ಲ. ಇದನ್ನು ಮನಗೊಂಡಿದ್ದ ಸರಕಾರ ಶಿವಮೊಗ್ಗದಲ್ಲಿ ಮಂಗಗಳಿಗಾಗಿ ವಿಶೇಷ ಪಾರ್ಕ ರಚನೆ ಮಾಡಲು 170 ಎಕರೆ ಜಾಗ ಗುರುತಿಸಿದ್ದು, ಬಜೆಟ್‍ನಲ್ಲಿ ಹಣ ಮೀಸಲಿಡಲಾಗಿದೆ. ಜನರಿಗೆ ತೊಂದರೆ ಕೊಡುವ ಮಂಗಗಳ ವರ್ತನೆ, ಅವನ್ನು ಹಿಡಿದು ಚಿಕಿತ್ಸೆ ಕೊಡಿಸಿ ಅರಣ್ಯಕ್ಕೆ ಬಿಡುವ ಬಗ್ಗೆ ಪಶು ವೈದ್ಯರಿಗೆ ತರಬೇತಿ ನೀಡಲು ನಿರ್ಧರಿಸಲಾಗಿದೆ ಎಂದು ಸರಕಾರಕ್ಕೆ ಸಲ್ಲಿಸಿರುವ ವರದಿಯಲ್ಲಿ ಉಲ್ಲೇಖಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News