ಚಾಮರಾಜನಗರ: ಜಮೀನಿನ ಬೇಲಿಯಲ್ಲಿ ಅಡಗಿದ್ದ 45 ಕೆಜಿ ತೂಕದ 13.5 ಅಡಿ ಉದ್ದದ ಹೆಬ್ಬಾವು ಸೆರೆ

Update: 2021-08-04 17:53 GMT

ಚಾಮರಾಜನಗರ: ಜಮೀನಿನ ಬೇಲಿಯಲ್ಲಿ ಅಡಗಿದ್ದ ಭಾರೀ ಗಾತ್ರದ ಹೆಬ್ಬಾವನ್ನು ಸೆರೆ ಹಿಡಿದು ಕಾಡಿಗೆ ಬಿಟ್ಟಿರುವ ಘಟನೆ ಚಾಮರಾಜನಗರ ತಾಲೂಕಿನ ಅಮೃತಭೂಮಿಯಲ್ಲಿ ನಡೆದಿದೆ.

ಅಮೃತಭೂಮಿಯ ಬಾಳೆ ತೋಟದಲ್ಲಿನ ಬೇಲಿಯನ್ನು ಕತ್ತರಿಸುತ್ತಿದ್ದ ವೇಳೆ ಹೆಬ್ಬಾವು ಇರುವುದು‌ ತಿಳಿದು ಅಮೃತ ಭೂಮಿಯ ನೌಕರರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಹೆಬ್ಬಾವಿನ ಗಾತ್ರ ಕಂಡು ಸೆರೆ ಹಿಡಿಯುವ ದುಸ್ಸಾಹಕ್ಕೆ ಹೋಗದ ಅರಣ್ಯ ಇಲಾಖೆ ಸಿಬ್ಬಂದಿ ಚಾಮರಾಜನಗರದ ಉರಗ ರಕ್ಷಕ ಸ್ನೇಕ್ ಚಾಂಪ್ ಅವರನ್ನು ಕರೆಸಿಕೊಂಡು ಹಾವನ್ನು ಸೆರೆ ಹಿಡಿದಿದ್ದಾರೆ.

13.5 ಅಡಿ ಉದ್ದದ 40 ಕೆಜಿ ತೂಕದ ಈ ಹೆಬ್ಬಾವು ಗಂಡಾಗಿದ್ದು ಆಕ್ರಮಣಕಾರಿಯಾಗಿ ವರ್ತಿಸಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ಸ್ನೇಕ್ ಚಾಂಪ್ ಅವರ ಕಾಲಿಗೆ ಸುತ್ತಿಕೊಂಡು ಅರಣ್ಯ ಇಲಾಖೆ ಸಿಬ್ಬಂದಿಯನ್ನು ಬೆಚ್ಚಿ ಬೀಳಿಸಿದ್ದು. ಅರ್ಧ ತಾಸು ಪ್ರಯಾಸದಿಂದ ಹಾವನ್ನು ಸೆರೆ ಹಿಡಿದು ಕೆ.ಗುಡಿ ಅರಣ್ಯಕ್ಕೆ ಹಾವನ್ನು ಬಿಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News