ಮೇಕೆದಾಟು ಅಣೆಕಟ್ಟು ನಿರ್ಮಾಣ ವಿರೋಧಿಸಿ ಅಣ್ಣಾಮಲೈ ಉಪವಾಸ ಸತ್ಯಾಗ್ರಹ

Update: 2021-08-05 12:21 GMT
photo:twitter 

ಚೆನ್ನೈ: ತಮಿಳುನಾಡು ಬಿಜೆಪಿ ಅಧ್ಯಕ್ಷ ಕೆ. ಅಣ್ಣಾಮಲೈ ಕರ್ನಾಟಕ ಸರಕಾರದ ಮೇಕೆದಾಟು ಅಣೆಕಟ್ಟು ನಿರ್ಮಾಣ ಯೋಜನೆಯನ್ನು ವಿರೋಧಿಸಿ ತಂಜಾವೂರು ಜಿಲ್ಲೆಯಲ್ಲಿ ಗುರುವಾರ ಒಂದು ದಿನದ ಉಪವಾಸ ಸತ್ಯಾಗ್ರಹ ನಡೆಸಿದ್ದಾರೆ.

ನಾವು ಯಾರಿಗೂ ಪ್ರತಿಕ್ರಿಯಿಸುವ ಹಾಗೂ ಸಾಬೀತುಪಡಿಸಲು ಇಲ್ಲಿಗೆ ಬಂದಿಲ್ಲ.ಕರ್ನಾಟಕ ತನ್ನ ನಿಲುವನ್ನು ಸ್ಪಷ್ಟಪಡಿಸಿದೆ. ಅಣೆಕಟ್ಟು ನಿರ್ಮಾಣದ ಯೋಜನೆಯನ್ನು ವಿರೋಧಿಸಿ ನಾವು ಪ್ರತಿಭಟಿಸುತ್ತೇವೆ. ಬೇರೆಯವರು ಏನು ಹೇಳುತ್ತಾರೆಂಬ ಕುರಿತು ಮಹತ್ವ ನೀಡುವ ಅಗತ್ಯವಿಲ್ಲ. ತಮಿಳುನಾಡು ರೈತರ ಪರವಾಗಿ ನಾವಿದ್ದೇವೆ ಎಂದು ಅಣ್ಣಾಮಲೈ ಹೇಳಿದ್ದಾರೆ.

ತಮಿಳುನಾಡು ಹಾಗೂ  ಕರ್ನಾಟಕ ರಾಜ್ಯಗಳು ಬೆಂಗಳೂರು ಸಮೀಪದ ಮೇಕೆದಾಟು ಪ್ರದೇಶದಲ್ಲಿ ಅಣೆಕಟ್ಟು ನಿರ್ಮಾಣದ ವಿಚಾರದಲ್ಲಿ ಪರಸ್ಪರ ಕಿತ್ತಾಟ ನಡೆಸುತ್ತಿವೆ.

ಕರ್ನಾಟಕದ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್‌ಗೆ ಅಣೆಕಟ್ಟು ನಿರ್ಮಾಣ ವಿಚಾರಕ್ಕೆ ಸಂಬಂಧಿಸಿ ಪತ್ರ ಬರೆದಿದ್ದರು. ಕರ್ನಾಟಕದಲ್ಲಿ ಬಿಜೆಪಿ ಸರಕಾರ ಅಣೆಕಟ್ಟು ನಿರ್ಮಿಸುವುದಾಗಿ ಹೇಳಿಕೊಂಡರೆ, ತಮಿಳುನಾಡು ರಾಜ್ಯ  ಈ ಕ್ರಮವನ್ನು ವಿರೋಧಿಸಿದೆ.

ಕರ್ನಾಟಕ ಸರಕಾರವು ಮೇಕೆದಾಟು ಮೇಲೆ ಅಣೆಕಟ್ಟು ನಿರ್ಮಿಸಿ ಬೆಂಗಳೂರು ನಗರಕ್ಕೆ ಕುಡಿಯುವ ನೀರನ್ನು ಒದಗಿಸಲು ಯೋಜನೆಯನ್ನು ಮುಂದುವರಿಸುವುದಾಗಿ ಹೇಳಿದೆ.

ನಟ-ರಾಜಕಾರಣಿಯಾಗಿರುವ ಕಮಲ್ ಹಾಸನ್ ಕೂಡ ಕರ್ನಾಟಕ ಬಿಜೆಪಿ ಸರಕಾರವನ್ನು ಈ ಹಿಂದೆ ಟೀಕಿಸಿದ್ದರು. ಅಣ್ಣಾಮಲೈ ಮತ್ತು ಹಾಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಬ್ಬರನ್ನು ಕೇಂದ್ರ ಸರ್ಕಾರದ ಎರಡು 'ಬೊಮ್ಮಾಯಿಗಳು' (ತಮಿಳುನಾಡಿನಲ್ಲಿ ಗೊಂಬೆಗಳು) ಎಂದು ಕಮಲ್ ಕರೆದಿದ್ದರು.

ಅಣ್ಣಾಮಲೈ ಅವರ ಉಪವಾಸ ಪ್ರತಿಭಟನೆಯನ್ನು ಉಲ್ಲೇಖಿಸಿದ  ಕಮಲ್ ಹಾಸನ್ ಅವರು 'ಭಾರತೀಯ ಚಿತ್ರರಂಗದಲ್ಲಿ ದ್ವಿ- ಪಾತ್ರಗಳಲ್ಲಿ ನಟಿಸಿದ್ದಾರೆ ಹಾಗೂ' ಡಬಲ್ ಆ್ಯಕ್ಟ್ 'ಮಾಡುವ ಯಾರನ್ನಾದರೂ ಸುಲಭವಾಗಿ ಗುರುತಿಸಬಹುದು ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News