ಅಮೆರಿಕದಲ್ಲಿ ಭಾರತೀಯ ಮಹಿಳೆಯಿಂದ ನ್ಯಾಯಕ್ಕಾಗಿ ಮೊರೆ

Update: 2021-08-05 14:35 GMT

ವಾಶಿಂಗ್ಟನ್, ಆ. 5: ನನ್ನ ಗಂಡ ಹಿಂಸೆ ನೀಡುತ್ತಿದ್ದಾರೆ ಎಂದು ಆರೋಪಿಸಿ ಹೊಸದಾಗಿ ಮದುವೆಯಾದ ಭಾರತೀಯ ಮಹಿಳೆಯೊಬ್ಬರು ಅಮೆರಿಕದಲ್ಲಿ ಹಲವು ವಾರಗಳಿಂದ ನ್ಯಾಯಕ್ಕಾಗಿ ಅಲೆದಾಡುತ್ತಿದ್ದಾರೆ. ಅವರು ಮಾರ್ಚ್ ತಿಂಗಳಲ್ಲಿ ಅಮೆರಿಕಕ್ಕೆ ಬಂದಿದ್ದಾರೆ.

‘‘ನನಗೆ ಯಾವುದೇ ಆರ್ಥಿಕ ನೆರವು ನೀಡದೆ ನನ್ನ ಗಂಡ ನನ್ನನ್ನು ತ್ಯಜಿಸಿದ್ದಾರೆ. ನನಗೆ ಇಲ್ಲಿ ಯಾರೂ ಇಲ್ಲ. ಭಾರತದಲ್ಲಿರುವ ನನ್ನ ಹೆತ್ತವರು ನನ್ನ ಮಾವನ ಸಹಾಯವನ್ನು ಕೋರಿದ್ದಾರೆ. ಆದರೆ ನನ್ನನ್ನು ಗಂಡನ ಜೊತೆ ಸೇರಿಸಬೇಕಾದರೆ ವರದಕ್ಷಿಣೆ ಕೊಡಬೇಕು ಎಂಬುದಾಗಿ ಅವರು ಬೇಡಿಕೆಯಿಟ್ಟಿದ್ದಾರೆ’’ ಎಂಬುದಾಗಿ ಬಿಹಾರದ ಪಾಟ್ನಾ ನಗರದ ಮಹಿಳೆ ತನ್ನ ದೂರಿನಲ್ಲಿ ಹೇಳಿದ್ದಾರೆ.

ಅವರು ದೂರನ್ನು ಭಾರತದ ಹಿರಿಯ ಅಧಿಕಾರಿಗಳು, ಇಲ್ಲಿನ ರಾಯಭಾರ ಕಚೇರಿ ಮತ್ತು ಸಾನ್‌ಫ್ರಾನ್ಸಿಸ್ಕೊದಲ್ಲಿರುವ ಭಾರತೀಯ ಕೌನ್ಸುಲೇಟ್ ಕಚೇರಿಗೆ ಕಳುಹಿಸಿದ್ದಾರೆ.

ಆದರೆ, ಈ ಆರೋಪಗಳನ್ನು ಗಂಡ ನಿರಾಕರಿಸಿದ್ದಾರೆ. ನನ್ನನ್ನು ವಿನಾಕಾರಣ ಬಲಿಪಶುಮಾಡಲಾಗುತ್ತಿದೆ ಎಂದು ಪಿಟಿಐಯೊಂದಿಗೆ ಮಾತನಾಡಿದ ಅವರು ಆರೋಪಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News