×
Ad

ಸಚಿವ ಸ್ಥಾನ ಸಿಗಬೇಕೆಂದು ಒತ್ತಡ ಹಾಕಬಹುದಿತ್ತು: ಸಂಸದ ಪ್ರತಾಪ್ ಸಿಂಹ ವಿರುದ್ಧ ಶಾಸಕ ಅಪ್ಪಚ್ಚು ರಂಜನ್ ಅಸಮಾಧಾನ

Update: 2021-08-06 19:15 IST

ಮಡಿಕೇರಿ ಆ.6 : ನೂತನ ಸಚಿವ ಸಂಪುಟದಲ್ಲಿ ತಮಗೆ ಸ್ಥಾನ ಸಿಗದಿರುವ ಬಗ್ಗೆ ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕ ಎಂ.ಪಿ.ಅಪ್ಪಚ್ಚುರಂಜನ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ಸಂಸದ ಪ್ರತಾಪ್ ಸಿಂಹ ಅವರಾದರೂ ನಮಗೆ ಸಚಿವ ಸ್ಥಾನ ಸಿಗಬೇಕೆಂದು ಒತ್ತಡ ಹಾಕಬಹುದಿತ್ತು. ಆದರೆ ಅವರೂ ಜಾಣ ಮೌನಕ್ಕೆ ಶರಣಾದರು' ಅಸಮಾಧಾನ ವ್ಯಕ್ತಪಡಿಸಿದರು. 

'ಕಳೆದ ಲೋಕ ಸಭಾ ಚುನಾವಣೆಯಲ್ಲಿ ಪ್ರತಾಪ್ ಸಿಂಹ ಅವರ ಗೆಲುವಿಗೆ 80 ಸಾವಿರ ಅಂತರದ ಮತಗಳನ್ನು ನೀಡಿದ್ದೇವೆ' ಎಂದು ಅಪ್ಪಚ್ಚುರಂಜನ್ ತಿಳಿಸಿದರು.

'ಹಿರಿಯ ಶಾಸಕನಾಗಿರುವ ನನಗೆ ಈ ಬಾರಿಯಾದರೂ ಸಚಿವ ಸ್ಥಾನ ಸಿಗುತ್ತದೆ ಎನ್ನುವ ವಿಶ್ವಾಸವಿತ್ತು. ಆದರೆ ಒಂದೊಂದು ಜಿಲ್ಲೆಗೆ 3, ಬೆಂಗಳೂರಿಗೆ 8 ಸಚಿವ ಸ್ಥಾನ ನೀಡಿ ನಮ್ಮನ್ನು ಗುರುತಿಸದೆ ಇರುವುದು ಬೇಸರ ತಂದಿದೆ' ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News