ಶಿವಮೊಗ್ಗ: ಸಚಿವ ಕೆ.ಎಸ್.ಈಶ್ವರಪ್ಪ ವಿರುದ್ಧ ಕಾಂಗ್ರೆಸ್ ನಿಂದ ದೂರು

Update: 2021-08-11 16:44 GMT

ಶಿವಮೊಗ್ಗ, ಆ.11: ಪ್ರಚೋದನಕಾರಿ ಭಾಷಣ ಮಾಡಿರುವ ಕೆ.ಎಸ್.ಈಶ್ವರಪ್ಪನವರ ವಿರುದ್ಧ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿ ಮಾಜಿ ಶಾಸಕ ಕೆ.ಬಿ.ಪ್ರಸನ್ನಕುಮಾರ್ ಅವರ ನೇತೃತ್ವದಲ್ಲಿ ಕಾಂಗ್ರೆಸ್ ಮುಖಂಡರು ಜಿಲ್ಲಾ ರಕ್ಷಣಾಧಿಕಾರಿಗಳಿಗೆ ದೂರು ನೀಡಿದ್ದಾರೆ.

ಆ.8ರ ಭಾನುವಾರದಂದು ನಗರದ ಬಿ.ಹೆಚ್.ರಸ್ತೆಯಲ್ಲಿರುವ ಗಾಯತ್ರಿ ಮಂಗಲ್ಯ ಮಂದಿರದಲ್ಲಿ ನಡೆದ ಬಿಜೆಪಿ ಕಾರ್ಯಕಾರಿಣಿ ಸಭೆಯಲ್ಲಿ ಈಶ್ವರಪ್ಪ ಅವರು ತಮ್ಮ ಕಾರ್ಯಕರ್ತರಿಗೆ ಬಹಿರಂಗವಾಗಿ ಕರೆ ನೀಡಿ ಪಕ್ಕದ ರಾಜ್ಯ ಕೇರಳದಲ್ಲಿ ರಾಷ್ಟ್ರೀಯ ಸೇವಾ ಸಂಘ ಆರಂಭ ಮಾಡಲು ಯಾವುದಾದರೂ ಕಾರ್ಯಕರ್ಯರು ಹೋದರೆ ಕೊಲೆಗಳನ್ನು ಮಾಡುತ್ತಿದ್ದರು. ಆಗ ನಮಗೆ ತಿರಿಗೆ ಹೊಡೆಯುವ ಶಕ್ತಿ ಇರಲ್ಲಿಲ್ಲ. ಇಂದು ಲಕ್ಷ ಲಕ್ಷ ಜನರು ಬಿಜೆಪಿ ಜೊತೆಗಿದ್ದಾರೆ. ಯಾವುದೇ ಮೂಲೆಯಲ್ಲಿ ಆದರೂ ಸರಿಯೇ ಬಿಜೆಪಿ ಕಾರ್ಯಕರ್ತನ ಮೈ ಮುಟ್ಟಿದರೆ ಅಲ್ಲಿಯೇ ಅವರನ್ನು ಹೊಡೆದು ಬಿಡಿ ಒಂದಕ್ಕೆ ಎರಡು ತೆಗೆಯಿರಿ ಎಂದು ಏರು ಧ್ವನಿಯಲ್ಲಿ ಹೇಳಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಸಚಿವರಾಗಿ ಸಮಾಜದ ಶಾಂತಿ ಸುವ್ಯವಸ್ಥೆಯನ್ನು ಕಾಪಾಡಬೇಕಾದವರು ಈ ರೀತಿ ಧ್ವೇಷದ ಕಿಡಿ ಹಚ್ಚುತ್ತಿರುವುದು ಮತ್ತು ಕೊಲೆ ಮಾಡಿ ಎಂದು ಜನರನ್ನು ಉದ್ರೇಕಿಸುವುದು ಕಾನೂನುನ ಉಲ್ಲಂಘನೆಯಾಗುತ್ತದೆ. ಇದ್ದರಿಂದ ಕೋಮು ಗಲಭೆಯಾಗುವ ಸಾಧ್ಯತೆಯೂ ಇದೆ. ಧರ್ಮಗಳ ನಡುವೆ ಧ್ವೇಷ ಉಂಟಾಗುತ್ತದೆ. ಆದ್ದರಿಂದ ಜಿಲ್ಲಾ ರಕ್ಷಣಾಧಿಕಾರಿಗಳು ಸ್ವಯಂ ಪ್ರೇರಿತವಾಗಿ ಕೇಸು ದಾಖಲಿಸಿಕೊಂಡು ಈಶ್ವರಪ್ಪ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ದೂರಿನಲ್ಲಿ ತಿಳಿಸಲಾಗಿದೆ.

ಈ ಸಂದರ್ಭದಲ್ಲಿ ಪಾಲಿಕೆ ಸದಸ್ಯ ಶಾಮೀರ್ ಖಾನ್, ಮಾಜಿ ಸದಸ್ಯರಾದ ಲಕ್ಷ್ಮಣ್, ಎಸ್.ಕೆ.ಶ್ಯಾಮಸುಂದರ್, ಬೊಮ್ಮನಕಟ್ಟೆ ಮಂಜ, ದೀಪಕ್‌ಸಿಂಗ್, ರಘು, ಮುಖಂಡರಾದ ಸುವರ್ಣನಾಗರಾಜ್ ಇನ್ನಿತರರು ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News