ಗೋ ಹತ್ಯೆ ನಿಷೇಧ ಕಾಯ್ದೆ ಜಾರಿ ನಂತರ ಸಾವಿರಾರು ಗೋವುಗಳ ಹತ್ಯೆಗೆ ಕಡಿವಾಣ: ಸಚಿವ ಪ್ರಭು ಚವ್ಹಾಣ್

Update: 2021-08-11 17:58 GMT

ಮೈಸೂರು,ಆ.11: ಗೋಹತ್ಯೆ ನಿಷೇಧ ಕಾಯ್ದೆ ಜಾರಿಗೆ ಬಂದ ಬಳಿಕ ಸಾವಿರಾರು ಗೋವುಗಳ ಹತ್ಯೆಗೆ ಕಡಿವಾಣ ಹಾಕಲಾಗಿದೆ ಎಂದು ಪಶು ಸಂಗೋಪನಾ ಸಚಿವ ಪ್ರಭು ಚವ್ಹಾಣ್ ತಿಳಿಸಿದರು.

ಚಾಮುಂಡಿಬೆಟ್ಟದ ತಪ್ಪಲಿನಲ್ಲಿರುವ ಸುತ್ತೂರುಮಠಕ್ಕೆ ಬುಧವಾರ ಭೇಟಿ ನೀಡಿ ಶ್ರೀಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅವರೊಂದಿಗೆ ಮಾತುಕತೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗೋ ಹತ್ಯೆ ನಿಷೇಧ ಕಾನೂನು ಅನುಷ್ಠಾನಕ್ಕೆ ಬಂದ ಬಳಿಕ ಗೋ ಹತ್ಯೆಗೆ ಕಡಿವಾಣ ಹಾಕಲಾಗಿದ್ದು, ಬಳಿಕ ಬಕ್ರೀದ್  ವೇಳೆಯಲ್ಲೇ 6 ಸಾವಿರ ಗೋವುಗಳನ್ನು ರಕ್ಷಣೆ ಮಾಡಲಾಗುದೆ. ಇದಕ್ಕಾಗಿ ಚೆಕ್ ಪೋಸ್ಟ್ ಗಳಲ್ಲಿ ಇಲಾಖಾ ವೈದ್ಯರನ್ನು ನಿಯೋಜಿಸಲಾಗಿತ್ತು. ಪಶು ಸಾಕಾಣೆ ತಡೆಯಲು ಎಸ್‍ಪಿ ಸೂಚನೆ ನೀಡಿದ ಪರಿಣಾಮ ಸುಮಾರು 6 ಸಾವಿರ ಹಸುಗಳ ಜೀವ ಉಳಿಸಿದೆವು ಎಂದರು.

ಇನ್ನು ಪ್ರತಿ ಜಿಲ್ಲೆಗೆ ಒಂದು ಗೋಶಾಲೆ ಆರಂಭಿಸಲು ಸರ್ಕಾರದಿಂದ ಅನುಮೋದನೆ ದೊರೆತಿದ್ದು, ಶೀಘ್ರದಲ್ಲೇ ಸ್ಥಾಪಿಸಲಿದ್ದೇವೆ. ದೇಶದಲ್ಲಿ ಮೊದಲ ಬಾರಿಗೆ ಸ್ಥಾಪಿಸಿದ ಪ್ರಾಣಿ ಸಾಕಾಣಿಕ ಕೇಂದ್ರಕ್ಕೆ 1 ತಿಂಗಳಲ್ಲೇ 10 ಸಾವಿರ ಕರೆ ಬಂದಿದೆ. ಈ ಪೈಕಿ ಶೇ.80 ಸಮಸ್ಯೆ ಬಗೆಹರಿಸಿದ್ದೇವೆ.ಪಶು ಸಂಜೀವಿನಿ ಪ್ರಾರಂಭಿಸಿದ್ದು, 25 ಆಂಬ್ಯುಲೆನ್ಸ್ ಬುಕ್ ಮಾಡಿದ್ದೇನೆ. ಶೀಘ್ರದಲ್ಲೇ ಎಲ್ಲ ಜಿಲ್ಲೆಗಳಿಗೂ ಆಂಬ್ಯುಲೆನ್ಸ್ ನೀಡಲಾಗುವುದು ಎಂದರು. ಬಕ್ರೀದ್ ಹಬ್ಬದ ವೇಳೆ ರಾಜ್ಯದಲ್ಲಿ 6 ಸಾವಿರ ಹಸು ರಕ್ಷ ಣೆ ಮಾಡಿದ್ದೇವೆ ಎಂದು ಮಾಹಿತಿ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News