ಬಾಲ ನ್ಯಾಯಮಂಡಳಿಗೆ ನೇಮಕ: ಆಯ್ಕೆ ಬಗ್ಗೆ ದಾಖಲೆ ಸಲ್ಲಿಸಲು ಹೈಕೋರ್ಟ್ ಆದೇಶ

Update: 2021-08-12 14:37 GMT

ಬೆಂಗಳೂರು, ಆ.12: ಸರಕಾರೇತರ ಸಂಸ್ಥೆಗೆ ಸೇರಿದ ಲತಾ ಜಗದೀಶ್ ನಾರಾಯಣ ಮತ್ತು ಎಸ್.ಎಂ.ಬಡಸ್ಕರ್ ಅವರನ್ನು ಬಾಲ ನ್ಯಾಯ ಮಂಡಳಿ ನೇಮಕ ಸಮಿತಿಗೆ ಸದಸ್ಯರನ್ನಾಗಿ ಆಯ್ಕೆ ಮಾಡಿದ ಪ್ರಕರಣಕ್ಕೆ ಕುರಿತಾದ ದಾಖಲೆಗಳನ್ನು ನ್ಯಾಯಾಲಯಕ್ಕೆ ಸಲ್ಲಿಸುವಂತೆ ರಾಜ್ಯ ಸರಕಾರಕ್ಕೆ ಹೈಕೋರ್ಟ್ ಆದೇಶಿಸಿದೆ.

ಅರ್ಜಿದಾರರಾದ ವಕೀಲೆ ಸುಧಾ ಕಾಟ್ವ ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ಹೈಕೋರ್ಟ್‍ನಲ್ಲಿ ನಡೆಯಿತು. ಜಿಲ್ಲೆಗಳಲ್ಲಿನ ಬಾಲನ್ಯಾಯ ಮಂಡಳಿ ಮತ್ತು ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷರು ಹಾಗೂ ಸದಸ್ಯರನ್ನು ಆಯ್ಕೆ ಮಾಡುವ ಕರ್ನಾಟಕ ರಾಜ್ಯ ಆಯ್ಕೆ ಸಮಿತಿಯ ಸದಸ್ಯರ ಸ್ಥಾನಕ್ಕೆ ಸರಕಾರೇತರ ಸಂಸ್ಥೆಗೆ ಸೇರಿದ ಲತಾ ಜಗದೀಶ್ ನಾರಾಯಣ ಮತ್ತು ಎಸ್.ಎಂ.ಬಡಸ್ಕರ್ ನೇಮಿಸಿದ ಕ್ರಮ ಪ್ರಶ್ನಿಸಿ ಸಲ್ಲಿಸಿದ ಅರ್ಜಿ ವಿಚಾರಣೆ ವೇಳೆ ನ್ಯಾಯಾಲಯ ಈ ಆದೇಶ ನೀಡಿದೆ.

ಮನವಿ ಏನು: ಕರ್ನಾಟಕ ರಾಜ್ಯ ಆಯ್ಕೆ ಸಮಿತಿಯ ಸದಸ್ಯ ಸ್ಥಾನಕ್ಕೆ ಸರಕಾರೇತರ ಸಂಸ್ಥೆಗೆ ಸೇರಿದ ಲತಾ ಜಗದೀಶ್ ನಾರಾಯಣ ಮತ್ತು ಎಸ್.ಎಂ.ಬಡಸ್ಕರ್ ಅವರನ್ನು ಸದಸ್ಯರನ್ನಾಗಿ ನೇಮಿಸಿರುವುದು ಬಾಲ ನ್ಯಾಯ ಕಾಯ್ದೆ(ಮಕ್ಕಳ ಆರೈಕೆ ಮತ್ತು ರಕ್ಷಣೆ) ಮಾದರಿ ಅಧಿನಿಯಮಗಳು-2016ರ ನಿಯಮ 87(1)(3)ಕ್ಕೆ ವಿರುದ್ಧವಾಗಿದೆ. ಹೀಗಾಗಿ, ಅವರ ನೇಮಕಾತಿ ಆದೇಶ ರದ್ದುಪಡಿಸಬೇಕು ಹಾಗೂ ಆಯ್ಕೆ ಸಮಿತಿಗೆ ಅರ್ಹರನ್ನು ನೇಮಿಸಲು ಸರಕಾರಕ್ಕೆ ನಿರ್ದೇಶಿಸಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News