ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ: ತನಿಖೆ ಕುರಿತು ಪ್ರತ್ಯೇಕ ಪ್ರಮಾಣ ಪತ್ರ ಸಲ್ಲಿಸಿ; ಹೈಕೋರ್ಟ್ ಸೂಚನೆ

Update: 2021-08-12 15:28 GMT

ಬೆಂಗಳೂರು, ಆ.12: ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದ ತನಿಖೆ ಎಸ್‍ಐಟಿ ಮುಖ್ಯಸ್ಥರಿಲ್ಲದೇ ಹೇಗೆ ನಡೆದಿದೆ ಎಂದು ಪ್ರಶ್ನಿಸಿರುವ ಹೈಕೋರ್ಟ್, ಸೌಮೇಂದು ಮುಖರ್ಜಿಗೆ ಪ್ರತ್ಯೇಕ ಪ್ರಮಾಣ ಪತ್ರದಲ್ಲಿ ತನಿಖೆಯ ಬಗ್ಗೆ ನಿಲುವು ತಿಳಿಸಲು ಸೂಚನೆ ನೀಡಿದೆ.

ಸಿಡಿ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸುವಂತೆ ಹಾಗೂ ಪ್ರಕರಣದ ತನಿಖೆ ಮಾಡಲು ಎಸ್‍ಐಟಿ ರಚಿಸಿದ ಕ್ರಮ ಪ್ರಶ್ನಿಸಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ವಿಚಾರಣೆ ಹೈಕೋರ್ಟ್ ನ್ಯಾಯಪೀಠದಲ್ಲಿ ನಡೆಯಿತು. 

ಎಸ್‍ಐಟಿಗೆ ಹಿರಿಯ ಅಧಿಕಾರಿಗಳ ನೇಮಿಸುವ ಉದ್ದೇಶವೇನು? ಅಧಿಕಾರಿಯ ಅನುಭವ ಮತ್ತು ಹಿರಿತನ ತನಿಖೆಗೆ ನೆರವಾಗಬೇಕು. ಅಧಿಕಾರಿ ರಜೆಯಲ್ಲಿದ್ದರೆ ತನಿಖೆ ಹೇಗೆ ಸಾಧ್ಯ? ಎಸ್‍ಐಟಿಗೆ ಮುಖ್ಯಸ್ಥರನ್ನು ನೇಮಿಸುವ ಉದ್ದೇಶವೇನು? ಎಂದು ಕೋರ್ಟ್ ಸರಕಾರವನ್ನು ಗಂಭೀರವಾಗಿ ಪ್ರಶ್ನಿಸಿತು. 

3 ತಿಂಗಳ ತನಿಖೆ ಎಸ್‍ಐಟಿ ಮುಖ್ಯಸ್ಥ ಸೌಮೇಂದು ಮುಖರ್ಜಿ ಅನುಪಸ್ಥಿತಿಯಲ್ಲಿ ನಡೆದಿದೆ. ಮುಖರ್ಜಿ ತಮ್ಮ ನಿಲುವು ಸ್ಪಷ್ಟಪಡಿಸಬೇಕು. ತನಿಖೆ ಸರಿಯಾಗಿ ನಡೆದಿದೆಯೇ ಇಲ್ಲವೇ ಪರಿಶೀಲಿಸಬೇಕಿತ್ತು. ಪ್ರತ್ಯೇಕ ಪ್ರಮಾಣಪತ್ರ ಸಲ್ಲಿಸಬೇಕಿತ್ತು. ಸೌಮೇಂದು ಮುಖರ್ಜಿ ತಮ್ಮ ಜವಾಬ್ದಾರಿ ವರ್ಗಾಯಿಸಿಲ್ಲ. ಕೇವಲ ವರದಿ ಸಲ್ಲಿಸುವ ಕೆಲಸ ಮಾತ್ರ ವರ್ಗಾಯಿಸಿದ್ದಾರೆ. ಹೀಗಾಗಿ ಎಸ್‍ಐಟಿ ಮುಖ್ಯಸ್ಥರು ತನಿಖೆ ಉಸ್ತುವಾರಿ ವಹಿಸಿದಂತಾಗಿಲ್ಲ ಎಂದ ಕೋರ್ಟ್, ಸೌಮೇಂದು ಅವರಿಗೆ ಪ್ರತ್ಯೇಕ ಪ್ರಮಾಣಪತ್ರದಲ್ಲಿ ತನಿಖೆಯ ಬಗ್ಗೆ ನಿಲುವು ತಿಳಿಸಲು ಸೂಚನೆ ನೀಡಿತು.

ರಮೇಶ್ ಜಾರಕಿಹೊಳಿ ಸೀಡಿ ಬಹಿರಂಗ ಪ್ರಕರಣದಲ್ಲಿ ಮಧ್ಯಂತರ ಆದೇಶವನ್ನು ಮುಂದುವರಿಸಿದ ಹೈಕೋರ್ಟ್, ಅಂತಿಮ ವರದಿ ಸಲ್ಲಿಸದಂತೆ ನೀಡಿದ್ದ ಆದೇಶವನ್ನು ಸೆ.3ರವರೆಗೆ ಮುಂದೂಡಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News