×
Ad

ಬೆಂಗಳೂರು: ಪಿಎಸ್ಸೈ ಮೇಲೆ ಗ್ರಾಮಸ್ಥರಿಂದ ಹಲ್ಲೆ; ಆರೋಪ

Update: 2021-08-12 20:43 IST

ಬೆಂಗಳೂರು, ಆ.12: ಗ್ರಾಮಸ್ಥನೋರ್ವನನ್ನು ವಶಕ್ಕೆ ಪಡೆಯಲು ತೆರಳಿದ ಪೊಲೀಸ್ ಸಬ್‍ಇನ್‍ಸ್ಪೆಕ್ಟರ್ ಮೇಲೆ ಹಲ್ಲೆ ನಡೆಸಿರುವ ಘಟನೆ ಮಾಗಡಿ ವ್ಯಾಪ್ತಿಯಲ್ಲಿ ವರದಿಯಾಗಿದೆ. ಘಟನೆಯಲ್ಲಿ ಮಾಗಡಿ ಠಾಣೆಯ ಪಿಎಸ್ಸೈ ಶ್ರೀಕಾಂತ್ ಎಂಬುವರ ತಲೆಗೆ ಗಾಯವಾಗಿದ್ದು, ಅವರನ್ನು ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಮುಂದುವರಿಸಲಾಗಿದೆ.

ಮಾಗಡಿ ತಾಲೂಕಿನ ಜೇನುಕಲ್ಲು ಪಾಳ್ಯದಲ್ಲಿ ಹೊಸದಾಗಿ ನಿರ್ಮಾಣಗೊಳ್ಳುತ್ತಿರುವ ಕ್ರಸರ್‍ಗೆ ಗ್ರಾಮಸ್ಥರು ತಡೆವೊಡ್ಡಿದ್ದರು. ಇದಾದ ಬಳಿಕ ಕ್ರಸರ್ ಮಾಲಕ ಮಾಗಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ದೂರಿನನ್ವಯ ಪಿಎಸ್ಸೈ ಶ್ರೀಕಾಂತ್ ಗ್ರಾಮಕ್ಕೆ ಬುಧವಾರ ಭೇಟಿ ನೀಡಿ, ಗ್ರಾಮದ ಗಿರಿಯಪ್ಪ ಎಂಬ ವ್ಯಕ್ತಿಯನ್ನು ಕರೆತರುವಾಗ ಪೆÇಲೀಸ್ ಹಾಗೂ ಗ್ರಾಮಸ್ಥರ ನಡುವೆ ಮಾತಿನ ಚಕಮಕಿ ನಡೆದಿದ್ದು, ಈ ವೇಳೆ ಶ್ರೀಕಾಂತ್ ಹಲ್ಲೆ ನಡೆಸಲಾಗಿದೆ ಎಂದು ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News