×
Ad

ಸಿಟಿ ರವಿಗೆ ಅವರ ಆಸಕ್ತಿ-ಸಂಸ್ಕೃತಿಗೆ ತಕ್ಕ ಹಾಗೆ ಬಾರ್-ಹುಕ್ಕಾಬಾರ್ ನೆನಪಾಗಿದೆ: ಸಿದ್ದರಾಮಯ್ಯ ತಿರುಗೇಟು

Update: 2021-08-12 22:04 IST

ಬೆಂಗಳೂರು: ಬೆಂಗಳೂರು: ಇತ್ತೀಚೆಗೆ ಇಂದಿರಾ ಕ್ಯಾಂಟೀನ್ ಗೆ ಮರುನಾಮಕರಣ ಮಾಡುವಂತೆ ಮಾಜಿ ಸಚಿವ ಸಿಟಿ ರವಿ ಮುಖ್ಯಮಂತ್ರಿ ಬೊಮ್ಮಾಯಿಗೆ ಮನವಿ ಮಾಡಿದ್ದು ಭಾರೀ ಚೆರ್ಚೆಗೆ ಕಾರಣವಾಗಿತ್ತು. ಇದೀಗ ಕಾಂಗ್ರೆಸ್ ಕಚೇರಿಯಲ್ಲಿ ನೆಹರು ಹೆಸರಿನಲ್ಲಿ ಹುಕ್ಕಾ ಬಾರ್  ತೆರೆಯಲಿ ಎಂದು ಹೇಳಿ ವಿವಾದಕ್ಕೆ ಗುರಿಯಾಗಿದ್ದಾರೆ. 

ಈ ಬಗ್ಗೆ ಟ್ವಿಟರ್ ನಲ್ಲಿ ಪ್ರತಿಕ್ರಿಯಿಸಿರುವ ಸಿದ್ದರಾಮಯ್ಯ, 'ಸಿಟಿ ರವಿಗೆ, ಅವರ ಆಸಕ್ತಿ-ಸಂಸ್ಕೃತಿಗೆ ತಕ್ಕ ಹಾಗೆ ಬಾರ್-ಹುಕ್ಕಾಬಾರ್ ನೆನಪಾಗಿದೆ.  ಅವರು ಅವರನ್ನು ಅಬಕಾರಿ ಸಚಿವರಾಗಿ ಮಾಡಿ ಅವರ ಆಸೆ ಈಡೇರಿಸಬೇಕು' ಎಂದು ವ್ಯಂಗ್ಯವಾಡಿದ್ದಾರೆ. 

'ಯಾರಿಗೆ ಏನು ಪ್ರಿಯವೋ ಅದೇ ನೆನಪಾಗುತ್ತೆ. ನಮಗೆ ಬಡವರನ್ನು ಕಂಡಾಗ ತಿನ್ನುವ ಅನ್ನ ನೆನಪಾಗಿ ಇಂದಿರಾ ಕ್ಯಾಂಟೀನ್ ಮಾಡಿದ್ದೇವೆ' ಎಂದು ಹೇಳಿದ್ದಾರೆ. 

'ಅನ್ನಭಾಗ್ಯ, ಇಂದಿರಾ ಕ್ಯಾಂಟೀನ್ ಗಳು ಬಿಜೆಪಿ ನಾಯಕರ‌‌ ಕಣ್ಣು ಕುಕ್ಕುತ್ತಿರುವುದು ಯಾಕೆ? ಅನ್ನಭಾಗ್ಯದ ಅಕ್ಕಿ ಕಡಿಮೆ ಮಾಡಿದಿರಿ, ಇಂದಿರಾ ಕ್ಯಾಂಟೀನ್ ಮುಚ್ಚಲು ನೋಡಿದಿರಿ. ಈಗ ಹೆಸರಿನ ವಿವಾದ. ಇವರ ಕೋಪ ನೆಹರೂ-ಇಂದಿರಾಗಾಂಧಿ ಮೇಲೆಯೋ? ಈ ಯೋಜನೆಗಳ ಫಲಾನುಭವಿಗಳಾದ ಬಡವರ ಮೇಲೆಯೋ?' ಎಂದು ಪ್ರಶ್ನಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News