×
Ad

ಮಂಡ್ಯ: ವೈದ್ಯನ ನಿರ್ಲಕ್ಷ್ಯದಿಂದ ಬಾಲಕ ಸಾವು; ಆರೋಪ

Update: 2021-08-12 22:11 IST
ವಿಶಾಂತ್

ಮಂಡ್ಯ, ಆ.12: ತಾಲೂಕಿನ ವಿ.ಸಿ.ಫಾರಂ ಬಳಿ ಇರುವ ಖಾಸಗಿ ಕ್ಲಿನಿಕ್ ವೈದ್ಯ ನೀಡಿದ ಚುಚ್ಚುಮದ್ದಿನಿಂದ ಬಾಲಕ ಮೃತಪಟ್ಟಿದ್ದಾನೆಂದು ಆರೋಪಿಸಿ ಚಂದಗಾಲು ಗ್ರಾಮಸ್ಥರು ನಗರದ ಜಿಲ್ಲಾಸ್ಪತ್ರೆಯ(ಮಿಮ್ಸ್) ಶವಾಗಾರದ ಎದುರು ಪ್ರತಿಭಟನೆ ನಡೆಸಿದರು.

ಅನಾರೋಗ್ಯ ನಿಮಿತ್ತ ಚಂದಗಾಲು ಗ್ರಾಮದ ಸಿ.ಡಿ.ವಿಜಯಕುಮಾರ್ ಅವರ ಪುತ್ರ ವಿಶಾಂತ್(17) ಅವರನ್ನು ವಿ.ಸಿ.ಫಾರಂ ಬಳಿ ಇರುವ ಮನಸ್ವಿ ಕ್ಲಿನಿಕ್‍ಗೆ ಬುಧವಾರ ಸಂಜೆ ಚಿಕಿತ್ಸೆಗೆ ಕರೆದೊಯ್ದಿದ್ದು, ಡಾ.ಕೆ.ಟಿ.ಸಂತೋಷ್ ನೀಡಿದ ಚುಚ್ಚುಮದ್ದಿನಿಂದ ಸಾವನ್ನಪ್ಪಿದ್ದಾನೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ವೈದ್ಯರು ನೀಡಿದ ಚುಚ್ಚುಮದ್ದಿನಿಂದ ಬಾಲಕನ ಆರೋಗ್ಯ ಮತ್ತಷ್ಟು ಬಿಗಡಾಯಿಸಿದೆ. ತಕ್ಷಣ ಜಿಲ್ಲಾಸ್ಪತ್ರೆಗೆ ಸಾಗಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ರಾತ್ರಿ ಮೃತಪಟ್ಟಿದ್ದಾನೆ. ಕೂಡಲೇ ಡಾ.ಸಂತೋಷ್ ಅವರನ್ನು ಬಂಧಿಸಬೇಕು. ಮೃತ ಬಾಲಕನ ಕುಟುಂಬಕ್ಕೆ ಪರಿಹಾರ ಕೊಡಬೇಕು ಎಂದು ಅವರು ಒತ್ತಾಯಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News