×
Ad

ನನಗೆ ನಿಮ್ಮ ನೆಹರೂರರನ್ನು ನೋಡಿಯೇ ಹುಕ್ಕಾ ಬಾರ್ ನೆನಪಾಗಿದ್ದು: ಸಿಟಿ ರವಿ ಪ್ರತಿಕ್ರಿಯೆ

Update: 2021-08-13 16:27 IST

ಬೆಂಗಳೂರು: ಕಾಂಗ್ರೆಸ್ ಕಚೇರಿಯಲ್ಲಿ ಹುಕ್ಕಾ ಬಾರ್ ತೆರೆಯಲಿ ಎಂದು ಹೇಳಿಕೆ ನೀಡಿದ್ದ ಮಾಜಿ ಸಚಿವ  ಸಿಟಿ ರವಿ, ಇದೀಗ ಸಿದ್ದರಾಮಯ್ಯ ಅವರ ಹೇಳಿಕೆಗೆ ಪ್ರತಿಕ್ರಿಯಿಸಿ ಮತ್ತೆ  ವಿವಾದ ಸೃಷ್ಟಿಸಿದ್ದಾರೆ. 

ಸಿಟಿ ರವಿ ಅವರ ಹೇಳಿಕೆ ವಿರುದ್ಧ ಕಾಂಗ್ರೆಸ್ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದ ಬೆನ್ನಲ್ಲೇ ಇದೀಗ ಮತ್ತೆ ಟ್ವೀಟ್ ಮಾಡಿರುವ ಸಿಟಿ ರವಿ, 'ಮಾನ್ಯ ಸಿದ್ದರಾಮಯ್ಯನವರೇ, ನನಗೆ ನಿಮ್ಮ ನೆಹರೂರವರನ್ನು ನೋಡಿಯೇ ಹುಕ್ಕಾ ಬಾರ್ ನೆನಪಾಗಿದ್ದು' ಎಂದು ಹೇಳಿದ್ದಾರೆ. 

'ಕ್ಯಾಂಟೀನ್ ಗೆ  ಅನ್ನಪೂರ್ಣೇಶ್ವರಿ ಎಂದು ಹೆಸರಿಟ್ಟಿದ್ದರೆ ಬಡವರ ಹಸಿವು ನೀಗುತ್ತಿರಲಿಲ್ಲವೇ?ನಿಮ್ಮನ್ನು ನೋಡಿದಾಗ ನಿಮ್ಮ ಸ್ನೇಹಿತರು ಹೇಳುತ್ತಿದ್ದ ನಿಮ್ಮ ಬ್ರಾಂಡ್ ನೆನಪಾಯಿತು' ಎಂದು ಬರೆದುಕೊಂಡಿದ್ದಾರೆ.

ಸಿಟಿ ರವಿಗೆ ಅವರ ಸಂಸ್ಕೃತಿಗೆ ತಕ್ಕ ಹಾಗೆ ಹುಕ್ಕಾ ಬಾರ್ ನೆನಪಾಗಿದೆ ಎಂಬ ಸಿದ್ದರಾಮಯ್ಯ ಅವರ ಹೇಳಿಕೆಗೆ ಪ್ರತಿಕ್ರಿಯಿಸಿರುವ ಸಿಟಿ ರವಿ, 'ಇಂದಿರಾ ಗಾಂಧಿ ಹೆಸರಿಟ್ಟಿದ್ದು ಯಾವ ಪುರುಷಾರ್ಥಕ್ಕಾಗಿ?' ಎಂದು ಪ್ರಶ್ನಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News