ಬೆಂಗಳೂರು: ನಕಲಿ ಅಂಕಪಟ್ಟಿ ಪ್ರಕರಣ; ಇಬ್ಬರು ಆರೋಪಿಗಳ ಬಂಧನ

Update: 2021-08-13 14:13 GMT

ಬೆಂಗಳೂರು, ಆ.12: ನಕಲಿ ಅಂಕಪಟ್ಟಿ ದಂಧೆ ನಡೆಸುತ್ತಿದ್ದ ಇಬ್ಬರು ಆರೋಪಿಗಳನ್ನು ಸಿಸಿಬಿ ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.   

ಪಂಜಾಬ್ ಮೂಲದ ದಂಪತಿಯಾದ ಮುಖೇಶ್ ಹಾಗೂ ರೋಹಿ ಬಂಧಿತ ಆರೋಪಿಯಾಗಿದ್ದಾರೆ. ಈ ಇಬ್ಬರು ಆರೋಪಿಗಳು ಕಳೆದ ಮೂವತ್ತು ವರ್ಷಗಳಿಂದ ಬೆಂಗಳೂರಿನಲ್ಲೇ ನೆಲೆಸಿ ಪೀಣ್ಯ ಬಳಿಯ ಶಿಕ್ಷಣ ಸಂಸ್ಥೆಯೊಂದನ್ನು ನಡೆಸುತ್ತಿದ್ದರು. ಆರೋಪಿಗಳು ಎಂಎ, ಎಂಬಿಎ, ಬಿಸಿಎ, ಬಿಟೆಕ್, ಬಿಬಿಎ, ಬಿಕಾಂ, ಬಿಎಸ್ಸಿ ಸೇರಿ ಹಲವು ಪದವಿ ಅಂಕಪಟ್ಟಿ ನೀಡುತ್ತಿದ್ದರು.

ಒಂದು ಡಿಗ್ರಿಗೆ ಅರವತ್ತರಿಂದ ಎಪ್ಪತ್ತು ಸಾವಿರದವರೆಗೆ ಹಣ ಪಡೆಯುತ್ತಿದ್ದರು. ಸಿವಿ ರಾಮನ್ ಯುನಿವರ್ಸಿಟಿ, ರವೀಂದ್ರನಾಥ್ ಠಾಗೋರ್ ಯುನಿವರ್ಸಿಟಿ, ಅಸೆಟ್ ಯುನಿವರ್ಸಿಟಿಗೆ ಸೇರಿದ ಮಾರ್ಕ್ ಕಾರ್ಡ್‍ಗಳನ್ನು ಆರೋಪಿಗಳು ನೀಡುತ್ತಿದ್ದರು ಎನ್ನಲಾಗಿದೆ. ಐನೂರಕ್ಕೂ ಹೆಚ್ಚು ಮಂದಿಗೆ ನಕಲಿ ಅಂಕಪಟ್ಟಿ ನೀಡಿರುವ ಮಾಹಿತಿ ದೊರೆತಿದ್ದು, ಈ ಸಂಬಂಧ ಪೀಣ್ಯ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News