×
Ad

ಪೌರ ಕಾರ್ಮಿಕರು ಶಾಸಕರ ವೈಯಕ್ತಿಕ ಕೆಲಸಗಾರರೇ?: ಸತೀಶ್‌ ರೆಡ್ಡಿ ಕುರಿತು ಸಾಮಾಜಿಕ ತಾಣದಲ್ಲಿ ಆಕ್ರೋಶ

Update: 2021-08-13 21:14 IST

ಬೆಂಗಳೂರು: ಸರಕಾರಿ ಕೆಲಗಾರರಾಗಿರುವ ಪೌರ ಕಾರ್ಮಿಕರನ್ನು ತಮ್ಮ ಮನೆಯ ಕೆಲಸಕ್ಕಾಗಿ ಬಳಸುತ್ತಿದ್ದಾರೆ ಎಂದು ದೀಪಕ್‌ ಬೋಪಣ್ಣ ಎಂಬವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಟ್ವಿಟರ್‌ ನಲ್ಲಿ ಈ ಕುರಿತಾದಂತೆ ವೀಡಿಯೋವೊಂದನ್ನು ಅವರು ಹಂಚಿಕೊಂಡಿದ್ದಾರೆ.

ಟ್ವಿಟರ್‌ ನಲ್ಲಿ ಪತ್ರಕರ್ತ ದೀಪಕ್‌ ಬೋಪಣ್ಣ ಅವರು "ಪೌರ ಕಾರ್ಮಿಕರು ಶಾಸಕರ ವೈಯಕ್ತಿಕ ಕೆಲಸಗಾರರೇ? ಇದು ಬೆಂಗಳೂರಿನಲ್ಲಿರುವ ಶಾಸಕರಾದ ಸತೀಶ್‌ ರೆಡ್ಡಿಯವರ ಐಶಾರಾಮಿ ನಿವಾಸವಾಗಿದೆ. ಬಿಬಿಎಂಪಿ ನಿಯೋಜನೆ ಮಾಡಿರುವ ಪೌರ ಕಾರ್ಮಿಕರು ಇಲ್ಲಿ ಕೆಲಸ ಮಾಡುತ್ತಿರುವುದು ಕಂಡು ಬಂದಿದೆ" ಎಂದು ಅವರು ಟ್ವೀಟ್‌ ಮಾಡಿದ್ದಾರೆ. 

ಒಂದು ವೇಳೆ ಅವರಿಗೆ ಪ್ರತ್ಯೇಕವಾಗಿ ಹಣ ಕೊಟ್ಟು ಕೆಲಸ ಮಾಡಿಸಿದ್ದಲ್ಲಿ ಅದು ಸರಿಯಾಗಿದೆ. ಆದರೆ ಹಣ ಕೊಡದೇ ಮಾಡಿಸಿದ್ದಾರೆ ಇದೊಂದು ಅವಮಾನಕರ ವಿಚಾರವಾಗಿದೆ. ನೇತಾಗಿರಿಯ ಪೂರ್ವಗ್ರಹಪೀಡಿತ ಶೈಲಿ ಎಂದು ವ್ಯಕ್ತಿಯೋರ್ವರು ಪ್ರತಿಕ್ರಿಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News