ಇಂದಿರಾ ಗಾಂಧಿ ಮೇಲೆ ಸಿದ್ದರಾಮಯ್ಯ ಅವರು ಕಪಟ ಅಭಿಮಾನ ತೋರಿಸಲು ಹೊರಟಿದ್ದಾರೆ: ನಳಿನ್ ಕುಮಾರ್ ಕಟೀಲ್

Update: 2021-08-13 19:00 GMT

ಬೆಂಗಳೂರು: ಇಂದಿರಾ ಕ್ಯಾಂಟಿನ್ ಗೆ 'ಅನ್ನಪೂರ್ಣೇಶ್ವರಿ' ಎಂದು ಹೆಸರಿಡುವಂತೆ ಮಾಜಿ ಸಚಿವ ಸಿಟಿ ರವಿ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಮಾಡಿಕೊಂಡ ಬೆನ್ನಲ್ಲೇ ಕಾಂಗ್ರೆಸ್ ನಾಯಕರು ಆಕ್ರೋಶ ವ್ಯಕ್ತಪಡಿಸಿ ಬಿಜೆಪಿ ನಾಯಕರ ವಿರುದ್ಧ ಕಿಡಿಗಾರಿದ್ದಾರೆ. 

ಇದೀಗ ಕಾಂಗ್ರೆಸ್ ನಾಯಕರ ಹೇಳಿಕೆಗಳಿಗೆ ಟ್ವಿಟರ್ ನಲ್ಲಿ ಪ್ರತಿಕ್ರಿಯಿಸಿರುವ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್,  'ಇಂದಿರಾ ಕ್ಯಾಂಟಿನ್ ಗೆ ಅನ್ನಪೂರ್ಣೇಶ್ವರಿ ಎಂದು ಹೆಸರಿಟ್ಟರೆ ಅಲ್ಪಸಂಖ್ಯಾತರಿಗೆ ಬೇಸರ ಆಗುತ್ತದೆ ಎಂದು ಸಿದ್ದರಾಮಯ್ಯ ಅವರು ಇಂದಿರಾ ಗಾಂಧಿ ಮೇಲೆ ಸಿದ್ದರಾಮಯ್ಯ ಅವರು ಕಪಟ ಅಭಿಮಾನ ತೋರಿಸಲು ಹೊರಟಿದ್ದಾರೆ' ಎಂದು ಹೇಳಿದ್ದಾರೆ.

'ತುರ್ತುಪರಿಸ್ಥಿತಿಯ ಮೂಲಕ ಪ್ರಜಾಪ್ರಭುತ್ವಕ್ಕೆ ದ್ರೋಹ ಎಸಗಿದವರ ಹೆಸರನ್ನು ಯಾವುದೇ ಸರ್ಕಾರಿ ವ್ಯವಸ್ಥೆಗೆ ಇಡುವುದೇ ಈ ದೇಶದ ಪ್ರಜೆಗಳಿಗೆ ಮಾಡುವ ದ್ರೋಹ' ಎಂದಿದ್ದಾರೆ.  

ಇನ್ನು ಇಂದಿರಾ ಕ್ಯಾಂಟಿನ್ ಮರುನಾಮಕರಣ ವಿಚಾರಕ್ಕೆ ಸಂಬಂಧಿಸಿ ಕಾಂಗ್ರೆಸ್ ಬಿಜೆಪಿ ನಾಯಕರ ಮಧ್ಯೆ ವಾಕ್ಸಮರ ಮುಂದುವರಿದಿದ್ದು, 'ಬಿಜೆಪಿಯವರು ಅನ್ನ ಕಿತ್ತುಕೊಳ್ಳುವವರೇ ಹೊರತು ನೀಡುವವರಲ್ಲ' ಎಂದು ಕಾಂಗ್ರೆಸ್ ಟೀಕಿಸಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News