×
Ad

ಲಿಖಿತ ಭಾಷಣದ ಸಂಪ್ರದಾಯ ಮುರಿದ ಮುಖ್ಯಮಂತ್ರಿ ಬೊಮ್ಮಾಯಿ

Update: 2021-08-15 18:25 IST

ಬೆಂಗಳೂರು, ಆ. 15: ಮುದ್ರಿತ ಭಾಷಣವನ್ನಷ್ಟೇ ಓದಿ ಮುಗಿಸುತ್ತಿದ್ದ ಈ ಹಿಂದಿನ ಮುಖ್ಯಮಂತ್ರಿಗಳ ಸಂಪ್ರದಾಯವನ್ನು ಮುರಿದಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ಮುದ್ರಿತ ಪ್ರತಿಯಲ್ಲಿಲ್ಲದ ಅನೇಕ ವಿಷಯಗಳನ್ನೂ ಇಂದು ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ನಡೆದ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.

ರವಿವಾರ ಸ್ವಾತಂತ್ರ್ಯ ದಿನಾಚರಣೆಯ ದಿನದಂದು ಧ್ವಜಾರೋಹಣ ನೆರವೇರಿಸುವ ಮುಖ್ಯಮಂತ್ರಿಗಳು ಭಾಷಣದ ಪ್ರತಿಯಲ್ಲಿರುವ ಭಾಷಣವನ್ನಷ್ಟೇ ಓದುತ್ತಾರೆ. ಆದರೆ, ಸಿಎಂ ಬೊಮ್ಮಾಯಿ ಅವರು ಸಾಂಪ್ರದಾಯದಿಂದ ಹೊರಬಂದು ಅನೇಕ ವಿಚಾರಗಳನ್ನು ಮಾತನಾಡಿದರು. ಈ ವೇಳೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪರವರನ್ನು ನೆನಪಿಸಿಕೊಂಡ ಬೊಮ್ಮಾಯಿ ಅವರಿಗೆ ಅಭಿನಂದನೆ ಸಲ್ಲಿಸಿದರು. 

ಈ ವೇಳೆ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುವುದು, ಜನಪರ ಆಡಳಿತ, ಆಡಳಿತದಲ್ಲಿ ಸುಧಾರಣೆ, ಜನರ ಮನೆ ಬಾಗಿಲಿಗೆ ಸರಕಾರದ ಆಡಳಿತ ಸೇವೆಯನ್ನು ತಲುಪಿಸುವುದು ನನ್ನ ಆದ್ಯತೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇದೇ ವೇಳೆ ಪ್ರಕಟಿಸಿದ್ದು, ವಿಶೇಷವಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News