ಎಕೆ ಕಿತ್ತೂರು ವಿನಿಯರ್ಸ್ ಸಂಸ್ಥೆಯಲ್ಲಿ ಸ್ವಾತಂತ್ರೋತ್ಸವ
ಕಿತ್ತೂರು: ಎಪ್ಪತ್ತೈದು ವರ್ಷದ ಅಮೃತ ಮಹೋತ್ಸವ ದ ಪ್ರಯುಕ್ತ ಕಿತ್ತೂರು ಇಂಡಸ್ಟ್ರಿಯಲ್ ಏರಿಯಾದಲ್ಲಿ ಇರುವ ಎಕೆ ಕಿತ್ತೂರು ವಿನಿಯರ್ಸ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯಲ್ಲಿ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು.
ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಬಂದಿದ್ದ ನಿವೃತ್ತ ಆರ್ಮಿ ಆಫಿಸರ್ ಮತ್ತು ರೂರಲ್ ಯೂತ್ ಡಿಫೆನ್ಸ್ ಅಕಾಡೆಮಿ ಇದರ ಸಂಸ್ಥಾಪಕರಾದ ಪರ್ವೇಝ್ ಹವಲ್ದಾರ್ ಅವರು ಧ್ವಜಾರೋಹಣ ನೆರೆವೇರಿಸದರು
ಈ ಸಂಧರ್ಭದಲ್ಲಿ ಮಾತನಾಡಿದ ಅವರು, "75ನೇ ಸ್ವತಂತ್ರ ದಿನಾಚರಣೆ ಇಡೀ ದೇಶ ಸಂಭ್ರಮದಿಂದ ಆಚರಿಸುತ್ತಿದ್ದು, ವೀರ ರಾಣಿ ಚೆನ್ನಮ್ಮನ ಕಿತ್ತೂರಿನಲ್ಲಿ ಕೂಡ ವಿವಿಧ ಕಡೆ ಆಚರಿಸಲಾಯಿತು. ರಾಣಿ ಚೆನ್ನಮ್ಮನ ಕೋಟೆ ಅಭಿವೃದ್ದಿ ಕಾರ್ಯ ಶುರುವಾಗುತ್ತಿದ್ದು, ಇದರ ಜೊತೆಗೇ ನಮ್ಮ ಹತ್ತಿರ ಇರುವ ಧಾರವಾಡ ಜಿಲ್ಲೆಯ ಬೇಲೂರ ಇಂಡಸ್ಟ್ರಿ ಬಹಳಷ್ಟು ಅಭಿವೃದ್ಧಿಯಾಗಿದ್ದು ಕಿತ್ತೂರು ಇಂಡಸ್ಟ್ರಿ ನಿಧಾನವಾಗಿ ಅಭಿವೃದ್ದಿ ಆಗುತ್ತಿದ್ದು, ಕಿತ್ತೂರು ಕೋಟೆಯ ಜೊತೆಗೆ ಇದನ್ನು ಕೂಡ ಅಭಿವೃದ್ಧಿ ಮಾಡುವುದು ಕಿತ್ತೂರು ಭಾಗದ ಪ್ರತಿಯೋಬ್ಬ ನಾಗರಿಕನ ಕರ್ತವ್ಯ. ಎಕೆ ಕಿತ್ತೂರು ವಿನಿಯರ್ಸ್ ಸಂಸ್ಥೆಯು ಕಿತ್ತೂರ ಭಾಗದ 80ಕ್ಕೂ ಹೆಚ್ಹು ಕಾರ್ಮಿಕರಿಗೆ ಉದ್ಯೋಗಾವಕಾಶ ಒದಗಿಸಿದೆ'' ಎಂದು ಹೇಳಿದರು
ಕಾರ್ಯಕ್ರಮದಲ್ಲಿ ಶ್ರೀ ಅನಿಲ್ ಕುಮಾರ್ ( ಸಿಇಒ, ಮಾಸ್ಟರ್ ಇಂಗ್ಲೀಷ್ ಟ್ರೇನಿಂಗ್ ಅಕಾಡೆಮಿ,ಬೆಳಗಾವಿ) ಫೈರೋಝ್ ದೇವಡಿ (ಮಾಲಕರು, ಅಹದ್ ಸ್ಟೀಲ್, ರಾಮಾಪುರ) ನಿಝಾಮ್ ಎಕೆ ( ಸಿಒಒ, ಎಕೆ ಕಿತ್ತೂರು ವಿನಿಯರ್ಸ್ ಪ್ರೈವೆಟ್ ಲಿಮಿಟೆಡ್) ಮತ್ತು ಸಂಸ್ಥೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.