ಕೊಳ್ಳೇಗಾಲ: ಯುವಕ ಆತ್ಮಹತ್ಯೆ
Update: 2021-08-15 19:33 IST
ಕೊಳ್ಳೇಗಾಲ.ಆ.15.ಪಟ್ಟಣದ ಅದರ್ಶ ಬಡಾವಣೆಯ 23 ವರ್ಷದ ಯುವಕ ಶನಿವಾರ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ವರದಿಯಾಗಿದೆ.
ಪಟ್ಟಣದ ಆದರ್ಶ ಬಡಾವಣೆಯ ಶೇಖರ್ ಎಂಬವರ ಮಗ ವಿಶಾಲ್(23) ಎಂಬಾತ ಮೃತ್ತ ಯುವಕನಾಗಿದ್ದು, ಜೀವನದಲ್ಲಿ ಬೇಸತ್ತು ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಫ್ಯಾನ್ ಗೆ ನೇಣು ಹಾಕಿಕೊಂಡಿದ್ದಾನೆ.
ಈ ಸಂಬಂಧ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು, ಶವವನ್ನು ಸರ್ಕಾರಿ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ. ಈ ಘಟನೆಗೆ ಯಾವುದೇ ಕಾರಣ ತಿಳಿದು ಬಂದಿಲ್ಲ. ಕೊಳ್ಳೇಗಾಲ ಪಟ್ಟಣದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸಿ.ಪಿ.ಐ.ಆರ್.ಮುಧೋಳ್.ಎಸ್ ಐ.ಚೇತನ್ ತನಿಖೆ ಕೈ ಗೊಂಡಿದ್ದಾರೆ.