×
Ad

ಸಾರಿಗೆ ಅಧಿಕಾರಿಗಳ ಕಾರ್ಯಾಚರಣೆ: ಒಂದೇ ನಂಬರ್‌ ಬಳಸಿ ಸಂಚರಿಸುತ್ತಿದ್ದ ಬಸ್ ಗಳ ವಶ

Update: 2021-08-17 17:14 IST

ಬೆಂಗಳೂರು, ಆಗಸ್ಟ್‌. 17: ಕೋಲಾರ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಇಂದು ಮುಳಬಾಗಿಲು ಹಾಗೂ ಬೇತಮಂಗಲದಲ್ಲಿ ಕ್ಷಿಪ್ರ ಕಾರ್ಯಾಚರಣೆ ನಡೆಸಿದ್ದು, ಒಂದೇ ನಂಬರ್‌ ಬಳಸಿಕೊಂಡು ತೆರಿಗೆ ವಂಚಿಸಿ ಸಂಚರಿಸುತ್ತಿದ್ದ ನಾಲ್ಕು ಬಸ್‌ ಗಳನ್ನು ವಶಪಡಿಸಿಕೊಂಡಿದ್ದಾರೆ. 

ಸಾರಿಗೆ ಇಲಾಖೆಯ ಹೆಚ್ಚುವರಿ ಆಯುಕ್ತ ನರೇಂದ್ರ ಹೋಳ್ಕರ್‌, ಜಂಟಿ ಆಯುಕ್ತೆ ಓಂಕಾರೇಶ್ವರಿ ನೇತೃತ್ವದಲ್ಲಿ ಕೋಲಾರ ಪ್ರಾದೇಶಿಕ ಸಾರಿಗೆ ಕಚೇರಿಯ ಮೋಟಾರು ವಾಹನ ನಿರೀಕ್ಷಕರಾದ ತಿಪ್ಪೇಸ್ವಾಮಿ ಸಿ, ಸುರೇಶ್‌ ಜಿಎನ್‌, ಸುಧೀರ್‌ ಬಾಬು ಟಿ ಅವರನ್ನೊಳಗೊಂಡಂತ ತಂಡ ಸುಮಾರು 10 ಲಕ್ಷ ತೆರಿಗೆ ವಂಚಿಸಿ ಒಂದೇ ನಂಬರ್‌ ಬಳಸಿಕೊಂಡು (KA 06 4815 - 2 ಬಸ್‌ ಗಳು) (KL 05 Q 2140 2 ಬಸ್‌ ಗಳು) ಹಾಗೂ ಕರ್ನಾಟಕ ರಾಜ್ಯಕ್ಕೆ ನೀಡಬೇಕಾದ ತೆರಿಗೆಯನ್ನು ನೀಡದೆ, ನಕಲಿ ನಂಬರ್‌ ಪ್ಲೇಟ್‌ ಗಳ ನ್ನು ಅಳವಡಿಸಿಕೊಂಡು ಸಂಚರಿಸುತ್ತಿದ್ದ ನಾಲ್ಕು ಬಸ್‌ ಗಳನ್ನು ವಶಪಡಿಸಿಕೊಂಡಿದ್ದಾರೆ. 

ಈ ಸಂಬಂಧ ದೂರನ್ನು ದಾಖಲಿಸಿಕೊಂಡಿದ್ದು ತನಿಖೆ ಮುಂದುವರೆದಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News