ನೂತನ ಕೇಂದ್ರ ಸಚಿವರ ಪರಿಚಯ ಮಾಡಿಕೊಡಲು ಅವಕಾಶ ಮಾಡಿಕೊಡದ ಹಿನ್ನಲೆಯಲ್ಲಿ “ಜನಾಶೀರ್ವಾದ”ಯಾತ್ರೆ: ಶೋಭಾ ಕರಂದ್ಲಾಜೆ

Update: 2021-08-17 14:25 GMT

ಮೈಸೂರು,ಆ.17: ಕೇಂದ್ರ ಸರ್ಕಾರದಲ್ಲಿ ನೂತನವಾಗಿ ಸಚಿವರಾದವರನ್ನು ಲೋಕಸಭೆ ಮತ್ತು ರಾಜ್ಯ ಸಭೆಯಲ್ಲಿ ಪರಿಚಯಿಸುವುದು ವಾಡಿಕೆ. ಆದರೆ ಈ ಬಾರಿ ಕಾಂಗ್ರೆಸ್ ಪಕ್ಷ ನೂತನ ಸಚಿವರ ಪರಿಚಯ ಮಾಡಿಕೊಳ್ಳಲು ಬಿಡದೆ ಅಧಿವೇಶನದಲ್ಲಿ ಗೊಂದಲ ಎಬ್ಬಿಸಿದರ ಪರಿಣಾಮ “ಜನಾಶೀರ್ವಾದ” ಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಕೇಂದ್ರ ಕೃಷಿ ಖಾತೆ ಸಚಿವೆ ಶೋಭಾ ಕರಂದ್ಲಾಜೆ ತಿಳಿಸಿದರು.

ನಗರದ ಬಿಜೆಪಿ ಕಚೇರಿಯಲ್ಲಿ ಮಂಗಳವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ನೂತನ ಸಚಿವರ ಪರಿಚಯಕ್ಕೆ ಕಾಂಗ್ರೆಸ್ ಪಕ್ಷದ ಲೋಕಸಭಾ ಮತ್ತು ರಾಜ್ಯ ಸಭಾ ಸದಸ್ಯರು ಅವಕಾಶ ಮಾಡಿಕೊಡದ ಹಿನ್ನಲೆಯಲ್ಲಿ ದೇಶಾದ್ಯಂತ “ಜನಾಶೀರ್ವಾದ” ಯಾತ್ರೆ ಹಮ್ಮಿಕೊಳ್ಳಲಾಗಿದೆ. ಅಧಿವೇಶನದಲ್ಲಿ ಪರಿಚಯ ಮಾಡಿಕೊಳ್ಳಲು ಅವಕಾಶ ಮಾಡಿಕೊಟ್ಟಿದ್ದರೆ 350 ಸದಸ್ಯರಿಗೆ ಮಾತ್ರ ನಾವುಗಳು ಪರಿಚಯವಾಗುತ್ತಿದ್ದೆವು. ಆದರೆ ಇಂದು 130 ಕೋಟಿ ಕೋಟಿ ಜನರಿಗೆ ನಾವುಗಳು ಪರಿಚಯವಾಗುತ್ತಿದ್ದೇವೆ. ಇದಕ್ಕೆ ಕಾಂಗ್ರೆಸ್ ಪಕ್ಷದವರಿಗೆ ಅಭಿನಂದನೆ ಸಲ್ಲಿಸುತ್ತೇವೆ ಎಂದು ಹೇಳಿದರು.

ಕಾಂಗ್ರೆಸ್ ಪಕ್ಷದವರ ದುರಾಡಳಿತವನ್ನು ದೇಶದ ಜನರಿಗೆ ತಿಳಿಸುತ್ತೇವೆ. ಅಧಿವೇಶನದಲ್ಲಿ ಚರ್ಚಿಸಿಬೇಕಾದ ವಿಷಯವನ್ನು ಚರ್ಚೆ ಮಾಡದೆ ಬರೀ ಗಲಾಟೆ ಎಬ್ಬಿಸಿ ನೂರು ದಿನಗಳ ಅಧಿವೇಶನವನ್ನು ಹಾಳು ಮಾಡಿದರು. ಇವರ ನಡವಳಿಕೆ ಮತ್ತು ದುರಾಡಳಿತವನ್ನು ದೇಶದ ಜನರಿಗೆ ತಿಳಿಸುತ್ತೇವೆ ಎಂದು ಶೋಭಾ ಕರಂದ್ಲಾಜೆ ಹೇಳಿದರು.

ಚುನಾವಣೆಗಾಗಿ ಜನಾಶೀರ್ವಾದ ಯಾತ್ರೆ ಮಾಡುತ್ತಿಲ್ಲ: ನಾವು ದೇಶದ ಪರಿಸ್ಥಿತಿ ತಿಳಿಸಲು ಜನಾಶೀರ್ವಾದ ಯಾತ್ರೆ ಮಾಡುತ್ತಿದ್ದೇವೆಯೇ ಹೊರತು ಚುನಾವಣೆಗಾಗಿ ಯಾತ್ರೆ ನಡೆಸುತ್ತಿಲ್ಲ. ಕಾಂಗ್ರೆಸ್ ಪಕ್ಷದವರ 70 ವರ್ಷ ಆಡಳಿತದಲ್ಲಿ ಜನರಿಗೆ ಮಾಡಿದ ದ್ರೋಹವನ್ನು ತಿಳಿಸುತ್ತಿದ್ದೇವೆ. ಇದರಲ್ಲಿ ಯಾವುದೇ ರಾಜಕೀಯ ಇಲ್ಲ ಎಂದು ಕಾಂಗ್ರೆಸ್ ಮುಖಂಡ ದಿನೇಶ್ ಗುಂಡೂರಾವ್ ಹೇಳಿಕಗೆ ತಿರುಗೇಟು ನೀಡಿದರು.

ಆಫ್ಘಾನಿಸ್ತಾನದಲ್ಲಿ ತಾಲಿಬಾನ್ ಉಗ್ರರ ಅಟ್ಟಹಾಸ ತೀರ್ವ ಖಂಡನೀಯ. ಪ್ರಜಾಪ್ರಭುತ್ವ ರಾಷ್ಟ್ರಗಳ ಮೇಲೆ ಇಂತಹ ದಾಳಿ ನಡೆಯುತ್ತಿರುವುದು ಆತಂಕ ತಂದಿದೆ. ಆಫ್ಘಾನಿಸ್ತಾನದ ಪಕ್ಕದಲ್ಲೇ ಪಾಕಿಸ್ತಾನ ಇದೆ. ಈ ವಿಚಾರದಲ್ಲಿ ಎಲ್ಲ ದೇಶಗಳು ಒಟ್ಟಾಗಿ ದನಿ ಎತ್ತಬೇಕು. ವಿಶ್ವಸಂಸ್ಥೆ ಮೇಲೆ ಒತ್ತಡ ಏರಿ ಸಮಸ್ಯೆ ಬಗೆ ಹರಿಸಬೇಕು. 

-ಶೋಭಾ ಕರಂದ್ಲಾಜೆ, ಕೇಂದ್ರ ಕೃಷಿ ಸಚಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News