×
Ad

ರಾಜ್ಯದ 83 ತಾಲೂಕುಗಳು ಪ್ರವಾಹಪೀಡಿತ: ರಾಜ್ಯ ಸರಕಾರ ಘೋಷಣೆ

Update: 2021-08-17 20:13 IST

ಬೆಂಗಳೂರು, ಆ.17: ರಾಜ್ಯದ 13 ಜಿಲ್ಲೆಗಳ 61 ತಾಲೂಕುಗಳನ್ನು ಅತಿವೃಷ್ಟಿ, ಪ್ರವಾಹಪೀಡಿತ ತಾಲೂಕುಗಳೆಂದು ಆ.11ರಂದು ಘೋಷಿಸಲಾಗಿತ್ತು. ಇಂದು ಸರಕಾರ ಹೆಚ್ಚುವರಿಯಾಗಿ 22 ತಾಲೂಕುಗಳನ್ನು ಪ್ರವಾಹಪೀಡಿತವೆಂದು ಘೋಷಿಸಿದೆ. ಆ ಮೂಲಕ ಒಟ್ಟು 83 ತಾಲೂಕುಗಳು ಪ್ರವಾಹಪೀಡಿತವಾಗಿವೆ.

ದಾವಣಗೆರೆ ಜಿಲ್ಲೆಯ ಹರಿಹರ, ಹೊನ್ನಾಳಿ, ನ್ಯಾಮತಿ, ರಾಯಚೂರು ಜಿಲ್ಲೆಯ ದೇವದುರ್ಗ, ಲಿಂಗಸಗೂರು, ರಾಯಚೂರು, ಬೆಳಗಾವಿ ಜಿಲ್ಲೆಯ ಅಥಣಿ, ಬೈಲಹೊಂಗಲ, ಚಿಕ್ಕೋಡಿ, ಗೋಕಾಕ್, ಹುಕ್ಕೇರಿ, ಖಾನಾಪುರ, ರಾಯಬಾಗ, ರಾಮದುರ್ಗ, ಸವದತ್ತಿ, ಕಿತ್ತೂರು, ನಿಪ್ಪಾಣಿ, ಕಾಗವಾಡ, ಮೂಡಲಗಿ ತಾಲೂಕು. 

ಬಾಗಲಕೋಟೆ ಜಿಲ್ಲೆಯ ಬಾದಾಮಿ, ಬಾಗಲಕೋಟೆ, ಬೀಳಗಿ, ಹುನಗುಂದ, ಜಮಖಂಡಿ, ಮುಧೋಳ, ಗುಳೇದಗುಡ್ಡ, ಇಳಕಲ್, ರಬಕವಿ ಬನಹಟ್ಟಿ, ಗದಗ ಜಿಲ್ಲೆಯ ನರಗುಂದ, ರೋಣ, ಹಾವೇರಿ ಜಿಲ್ಲೆಯ ಬ್ಯಾಡಗಿ, ಹಾನಗಲ್, ಹಾವೇರಿ, ಹಿರೇಕೆರೂರು, ರಾಣೆಬೆನ್ನೂರು, ಸವಣೂರು, ಶಿಗ್ಗಾಂವ್, ರಟ್ಟಿಹಳ್ಳಿ, ಧಾರವಾಡ ಜಿಲ್ಲೆಯ ಧಾರವಾಡ, ಕಲಘಟಗಿ, ಕುಂದಗೋಳ, ನವಲಗುಂದ, ಅಳ್ನಾವರ ತಾಲೂಕುಗಳನ್ನು ಪ್ರವಾಹಪೀಡಿತವೆಂದು ಘೋಷಿಸಲಾಗಿದೆ.

ಜೊತೆಗೆ, ಬೆಳಗಾವಿ, ಚಿಕ್ಕಮಗಳೂರು, ಹುಬ್ಬಳ್ಳಿನಗರ, ಕಡೂರು, ದಾವಣಗೆರೆ, ದಾಂಡೇಲಿ, ಆಲೂರು ಲಕ್ಷ್ಮೇಶ್ವರ, ತರೀಕೆರೆ, ಮುಂಡಗೋಡು, ಸೂಪ, ಹುಬ್ಬಳ್ಳಿ, ಭದ್ರಾವತಿ, ಚನ್ನಗಿರಿ, ಅಣ್ಣಿಗೇರಿ, ಬಬಲೇಶ್ವರ, ನಿಡಗುಂದಿ, ಕೊಲ್ಹಾರ, ಮುದ್ದೇಬಿಹಾಳ, ಹರಪನಹಳ್ಳಿ, ಹೊಸನಗರ, ಮೂಡಿಗೆರೆ ತಾಲೂಕುಗಳನ್ನು ಪ್ರವಾಹಪೀಡಿತ ತಾಲೂಕುಗಳೆಂದು ಸರಕಾರ ಘೋಷಿಸಿದೆ.

ಶಾಸಕ ಎಂ.ಪಿ.ಕುಮಾರಸ್ವಾಮಿ ಹೋರಾಟಕ್ಕೆ ಜಯ

ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕನ್ನು ಪ್ರವಾಹಪೀಡಿತವೆಂದು ಘೋಷಿಸುವಂತೆ ಆಗ್ರಹಿಸಿ ಬಿಜೆಪಿ ಶಾಸಕ ಎಂ.ಪಿ.ಕುಮಾರಸ್ವಾಮಿ ತಮ್ಮದೇ ಪಕ್ಷದ ಸರಕಾರದ ವಿರುದ್ಧ ವಿಧಾನಸೌಧದ ಆವರಣದಲ್ಲಿರುವ ಮಹಾತ್ಮಗಾಂಧಿ ಪ್ರತಿಮೆ ಬಳಿ ಇತ್ತೀಚೆಗೆ ಧರಣಿ ನಡೆಸಿದ್ದರು. ಇದೀಗ ಸರಕಾರ ಮೂಡಿಗೆರೆ ತಾಲೂಕನ್ನು ಪ್ರವಾಹಪೀಡಿತವೆಂದು ಘೋಷಿಸಿದ್ದು, ಕುಮಾರಸ್ವಾಮಿ ಹೋರಾಟಕ್ಕೆ ಜಯ ಸಿಕ್ಕಂತಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News