×
Ad

ಅವಮಾನಿಸಿ ಯಡಿಯೂರಪ್ಪರನ್ನು ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿಸಿದರು: ರಣದೀಪಸಿಂಗ್ ಸುರ್ಜೆವಾಲ್

Update: 2021-08-17 21:48 IST

ರಾಯಚೂರು, ಆ.17: ಬಿ.ಎಸ್.ಯಡಿಯೂರಪ್ಪ ಅವರನ್ನು ಅಪಮಾನಿಸಿ ಮುಖ್ಯಮಂತ್ರಿ ಅಧಿಕಾರದಿಂದ ಕೆಳಗಿಳಿಸಲಾಗಿದೆ ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪಸಿಂಗ್ ಸುರ್ಜೆವಾಲ್ ಹೇಳಿದರು.

ಮಂಗಳವಾರ ನಗರದಲ್ಲಿ ಆಯೋಜಿಸಿದ್ದ, ವಿಭಾಗಮಟ್ಟದ ಕಾಂಗ್ರೆಸ್ ಸಮಾವೇಶದ ಬಳಿಕ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ರಾಜ್ಯ ಸರಕಾರವು ಜನರಿಂದ ಆಯ್ಕೆಯಾಗಿಲ್ಲ. ಶಾಸಕರನ್ನು ಖರೀದಿಸಿ ಆಡಳಿತಕ್ಕೆ ಬಂದಿರುವ ಸರಕಾರ ಇದಾಗಿದೆ. ಬಿ.ಎಸ್. ಯಡಿಯೂರಪ್ಪ ಅವರನ್ನು ಅಪಮಾನಿಸಿ ಮುಖ್ಯಮಂತ್ರಿ ಅಧಿಕಾರದಿಂದ ಕೆಳಗಿಳಿಸಲಾಗಿದೆ. ಏಕೆ ಮುಖ್ಯಮಂತ್ರಿಯನ್ನು ಕೈಬಿಡಲಾಯಿತು ಎಂಬುದನ್ನು ಇದುವರೆಗೂ ಬಿಜೆಪಿ ಕಾರಣವೂ ಹೇಳಿಲ್ಲ ಎಂದರು.

ಇನ್ನು, ರಾಜ್ಯ ಸಚಿವ ಸಂಪುಟದಲ್ಲಿ ಕಲ್ಯಾಣ ಕರ್ನಾಟಕ ಭಾಗಕ್ಕೆ ಕೇವಲ ಮೂರು ಸ್ಥಾನಗಳನ್ನು ನೀಡಿ, ಈ ಭಾಗದ ಅಭಿವೃದ್ಧಿಗೆ ವಿರೋಧಿ ಎಂಬುದನ್ನು ಸರಕಾರ ತೋರಿಸಿದೆ. ಈ ಭಾಗದಲ್ಲಿ ತೊಗರಿ ಪ್ರಮುಖ ಬೆಳೆಯಾಗಿದೆ. ಆದರೂ ಕೇಂದ್ರ ಸರಕಾರವು ತೊಗರಿ ಆಮದು ಮೇಲಿನ ಸುಂಕ ಸಂಪೂರ್ಣ ಕೈಬಿಟ್ಟಿರುವುದರಿಂದ ತೊಗರಿ ಬೆಳೆಗಾರರಿಗೆ ಅನ್ಯಾಯವಾಗಲಿದೆ ಎಂದು ಆರೋಪಿಸಿದರು.

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮಾತನಾಡಿ, 75ನೆ ಸ್ವಾತಂತ್ರ್ಯ ದಿನಾಚರಣೆ ನಿಮಿತ್ತ ವರ್ಷವಿಡೀ ಅಮೃತ ಮಹೋತ್ಸವ ಕಾರ್ಯಕ್ರಮಗಳನ್ನು ಆಚರಿಸುವುದಕ್ಕೆ ಪ್ರತಿ ಕಾರ್ಯಕರ್ತರಿಗೂ ಗುರಿ ನೀಡಲಾಗಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News