ಬೆಂಗಳೂರಿನಲ್ಲಿ ವೃದ್ಧದಂಪತಿಯ ಹತ್ಯೆ

Update: 2021-08-20 16:17 GMT

ಬೆಂಗಳೂರು, ಆ.20:ರಾಜಧಾನಿ ಬೆಂಗಳೂರಿನಲ್ಲಿ ಹಾಡಹಗಲೇ ದುಷ್ಕರ್ಮಿಗಳು ವೃದ್ಧದಂಪತಿಯನ್ನು ಹತ್ಯೆ ಮಾಡಿ ಪರಾರಿಯಾಗಿರುವ ಘಟನೆ ಕುಮಾರಸ್ವಾಮಿ ಲೇಔಟ್‌ನಲ್ಲಿ ನಡೆದಿದೆ. ಮೃತರನ್ನು ಕಾಶಿನಗರದ ನಿವಾಸಿಗಳಾದ ಶಾಂತರಾಜು(70), ಪ್ರೇಮಲತಾ(65) ಎಂದುಗುರುತಿಸಲಾಗಿದೆ. ದುಷ್ಕರ್ಮಿಗಳು ದಂಪತಿಯನ್ನು ಚಾಕುವಿನಿಂದ ಹತ್ಯೆ ಮಾಡಿದ್ದಾರೆ.

ಹತ್ಯೆಗೀಡಾದ ಶಾಂತರಾಜು ಬಿಎಂಟಿಸಿ ನಿವೃತ್ತ ನೌಕರರಾಗಿದ್ದು,ಇವರು ಹಲವು ವರ್ಷಗಳಿಂದ ಕಾಶಿನಗರದಲ್ಲಿ ವಾಸವಾಗಿದ್ದರು. ಹತ್ಯೆಯಾಗಿರುವದಂಪತಿಗೆ ಮಕ್ಕಳಿರಲಿಲ್ಲ. ಒಂದು ಮನೆಯಲ್ಲಿದಂಪತಿಇದ್ದು, ಇನ್ನೇರಡು ಮನೆಗಳನ್ನು ಬಾಡಿಗೆಗೆಕೊಟ್ಟಿದ್ದರು. ಮನೆಯಲ್ಲಿ ಮೂವರು ಚಹಾ ಕುಡಿದ ಲೋಟಗಳು ಟೇಬಲ್ ಮೇಲಿವೆ. ಚಿನ್ನಾಭರಣ ಹಾಗೂ ಹಣದೋಚುವ ಸಲುವಾಗಿ ಪರಿಚಯವಿದ್ದವರೇಕೃತ್ಯಎಸಗಿರುವ ಶಂಕೆ ಇದೆಎಂದು ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ.

ಘಟನಾ ಸ್ಥಳಕ್ಕೆ ನಗರದಕ್ಷಿಣ ವಿಭಾಗದ ಡಿಸಿಪಿ ಹರೀಶ್ ಪಾಂಡೆ, ಹೆಚ್ಚುವರಿ ಪೊಲೀಸ್‌ಆಯುಕ್ತ ಸೌಮೇಂದು ಮುಖರ್ಜಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಈ ಮೊಕದ್ದಮೆ ದಾಖಲಿಸಿಕೊಂಡಿರುವಕುಮಾರಸ್ವಾಮಿ ಲೇಔಟ್‌ಠಾಣೆ ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News