ವಾರಾಂತ್ಯ ಕರ್ಫ್ಯೂ ಜಾರಿಯಲ್ಲಿರುವ ಚಾಮರಾಜನಗರದಲ್ಲಿ ಸಚಿವ ಸೋಮಶೇಖರ್ ರಿಂದ ಕೋವಿಡ್ ನಿಯಮ ಉಲ್ಲಂಘನೆ
Update: 2021-08-21 11:25 IST
ಚಾಮರಾಜನಗರ, ಆ.21: ಕರ್ನಾಟಕ -ಕೇರಳ ಗಡಿ ಚಕ್ ಪೋಸ್ಟ್ ವೀಕ್ಷಣೆಗೆ ಶನಿವಾರ ಬೆಳಗ್ಗೆ ಆಗಮಿಸಿದ್ದ ಸಹಕಾರ ಸಚಿವ ಹಾಗೂ ಮೈಸೂರು ಚಾಮರಾಜನಗರ ಜಿಲ್ಲೆಗಳ ಕೋವಿಡ್ ನಿಯಂತ್ರಣ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಕೋವಿಡ್ ನಿಯಾಮಾವಳಿಗಳನ್ನು ಉಲ್ಲಂಘಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಚಾಮರಾಜನಗರ ಜಿಲ್ಲೆಯಲ್ಲಿ ವಾರಾಂತ್ಯ ಕರ್ಫ್ಯೂ ಜಾರಿಯಲ್ಲಿದೆ ಅದರಲ್ಲೂ ಕೇರಳ ರಾಜ್ಯಕ್ಕೆ ಹೊಂದಿಕೊಂಡಿರುವ ಗಡಿ ಚಕ್ ಪೋಸ್ಟ್ ವೀಕ್ಷಣೆಗೆ ಬಂದಿರುವ ಸಚಿವ ಎಸ್. ಟಿ. ಸೋಮಶೇಖರ್ ಬಂಡೀಪುರ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯಲ್ಲಿನ ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ಆಗಮಿಸಿದಾಗ ಕೋವಿಡ್ ನಿಯಮ ಪಾಲಿಸಲಿಲ್ಲ. ಮಾಸ್ಕ್ ಧರಿಸಿರಲಿಲ್ಲ.
ಎಸ್ ಟಿ ಸೋಮಶೇಖರ್ ಮಾತ್ರವಲ್ಲ ಗುಂಡ್ಲುಪೇಟೆ ಶಾಸಕ ಸಿ.ಎಸ್. ನಿರಂಜನ್ ಕುಮಾರ್ ಮತ್ತು ಬೆಂಬಲಿಗರೂ ಸಹ ಕೋವಿಡ್ ನಿಯಮಗಳನ್ನು ಗಾಳಿಗೆ ತೂರಿದ್ದು ಕಂಡುಬಂತು. ಇದನ್ನು ಕಂಡರೂ ಜೊತೆಗಿದ್ದ ಅಧಿಕಾರಿಗಳು ಮೌನವಹಿಸಿದ್ದು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.