ರಾಜ್ಯದಲ್ಲಿ ಶನಿವಾರ 1,350 ಮಂದಿಗೆ ಕೊರೋನ ಸೋಂಕು ದೃಢ; 18 ಮಂದಿ ಸಾವು

Update: 2021-08-21 14:43 GMT

ಬೆಂಗಳೂರು, ಆ.21: ರಾಜ್ಯದಲ್ಲಿ ಶನಿವಾರ 1,350 ಕೋವಿಡ್ ಸೋಂಕಿತ ಪ್ರಕರಣ ದಾಖಲಾಗಿದ್ದು, 18 ಮಂದಿ ಸಾವನ್ನಪಿದ್ದಾರೆ. 1,648 ಮಂದಿ ಬಿಡುಗಡೆಯಾಗಿದ್ದಾರೆಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದ್ದಾರೆ.

ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 29,37,427ಕ್ಕೆ ಏರಿದ್ದು, 37,123 ಮಂದಿ ಸಾವನ್ನಪ್ಪಿದ್ದಾರೆ. ಒಟ್ಟು 20,845 ಸಕ್ರಿಯ ಪ್ರಕರಣಗಳಿದ್ದು, ಅವರೆಲ್ಲರೂ ಆಸ್ಪತ್ರೆ, ಕೋವಿಡ್ ಸೆಂಟರ್ ಹಾಗೂ ಮನೆಯಲ್ಲಿ ಚಿಕಿತ್ಸೆಯಲ್ಲಿದ್ದಾರೆ.

18 ಸಾವು: ರಾಜ್ಯದಲ್ಲಿ 18 ಮಂದಿ ಕೋವಿಡ್‍ಗೆ ಬಲಿಯಾಗಿದ್ದು, ಬಳ್ಳಾರಿ 1, ಬೆಳಗಾವಿ 1, ಬೆಂಗಳೂರು ಗ್ರಾಮಾಂತರ 1, ಬೆಂಗಳೂರು ನಗರ 1, ದಕ್ಷಿಣಕನ್ನಡ 4, ದಾವಣಗೆರೆ 1, ಹಾಸನ 2, ಹಾವೇರಿ 1, ಕೋಲಾರ 2, ಮೈಸೂರು 1, ರಾಮನಗರ 1, ಶಿವಮೊಗ್ಗ 2ಸಾವಿರ ಪ್ರಕರಣ ವರದಿಯಾಗಿದೆ. 

1350 ಮಂದಿ ಸೋಂಕಿತರು: ರಾಜ್ಯಾದ್ಯಂತ ಶನಿವಾರ 1,350 ಮಂದಿ ಕೋವಿಡ್ ಸೋಂಕಿಗೆ ಒಳಗಾಗಿದ್ದು, ಬಾಗಲಕೋಟೆ 1, ಬಳ್ಳಾರಿ 2, ಬೆಳಗಾವಿ 43, ಬೆಂಗಳೂರು ಗ್ರಾಮಾಂತರ 5, ಬೆಂಗಳೂರು ನಗರ 260, ಬೀದರ್ 1, ಚಾಮರಾಜನಗರ 6, ಚಿಕ್ಕಬಳ್ಳಾಪುರ 2, ಚಿಕ್ಕಮಗಳೂರು 17, ಚಿತ್ರದುರ್ಗ 16, ದಕ್ಷಿಣಕನ್ನಡ 320, ದಾವಣಗೆರೆ 15, ಧಾರವಾಡ 5, ಗದಗ 2, ಹಾಸನ 101, ಕಲಬುರಗಿ 2, ಕೊಡಗು 63, ಕೋಲಾರ 17, ಮಂಡ್ಯ 26, ಮೈಸೂರು 102, ರಾಮನಗರ 3, ಶಿವಮೊಗ್ಗ 50, ತುಮಕೂರು 68, ಉಡುಪಿ 177, ಉತ್ತರಕನ್ನಡ 40, ವಿಜಯಪುರ 6 ಸೋಂಕಿತ ಪ್ರಕರಣಗಳು ಕಂಡು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News