ಆನೇಕಲ್ : ರಸ್ತೆ ಅಪಘಾತಕ್ಕೆ ದಂಪತಿ ಸ್ಥಳದಲ್ಲಿಯೇ ಮೃತ್ಯು
Update: 2021-08-22 15:34 IST
ಆನೇಕಲ್ : ಬೈಕ್ ಮತ್ತು ಲಾರಿ ನಡುವೆ ಮುಖಾಮುಖಿ ಢಿಕ್ಕಿಯಾಗಿ ಉಂಟಾದ ಅಪಘಾತದಲ್ಲಿ ಬೈಕ್ ನಲ್ಲಿದ್ದ ದಂಪತಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.
ಆನೇಕಲ್-ತಳಿ ಮುಖ್ಯ ರಸ್ತೆಯ ಚೂಡೇನಹಳ್ಳಿ ಬಳಿ ಅಪಘಾತ ನಡೆದಿದ್ದು, ಕಿತ್ತಗಾನಹಳ್ಳಿ ನಿವಾಸಿ ಮುನಿರಾಜು (53) ಮತ್ತು ಅವರ ಪತ್ನಿ ಈಶ್ವರಮ್ಮ (48) ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಆನೇಕಲ್ ನಿಂದ ಚೂಡೇನಹಳ್ಳಿ ಕಡೆಗೆ ಹೆಣ್ಣು ನೋಡಲು ದಂಪತಿ ತೆರಳುವ ಸಂದರ್ಭ ವೇಗವಾಗಿ ಬಂದ ದಿನಸಿ ತುಂಬಿದ್ದ ಲಾರಿ ಢಿಕ್ಕಿ ಹೊಡೆದ ಪರಿಣಾಮ ದುರಂತ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಬಗ್ಗೆ ಇಲ್ಲಿನ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.