ರಾಜ್ಯದಿಂದ ತಮಿಳುನಾಡಿಗೆ ನಾಳೆಯಿಂದ ಬಸ್ ಸಂಚಾರ ಪುನರಾರಂಭ

Update: 2021-08-22 16:42 GMT

ಬೆಂಗಳೂರು: ಕೋವಿಡ್ ನಿರ್ಬಂಧದಿಂದಾಗಿ ಸ್ಥಗಿತಗೊಂಡಿದ್ದ ಕರ್ನಾಟಕ- ತಮಿಳುನಾಡು ಕೆಎಸ್ಸಾರ್ಟಿಸಿ ಬಸ್ ಸಂಚಾರ ಸೋಮವಾರದಿಂದ(ಅ. 23) ಪುನರಾರಂಭವಾಗಲಿದೆ. 

ಹೊಸೂರು, ವೆಲ್ಲೂರು, ತಿರುವಣ್ಣಾಮಲೈ, ವಿಲ್ಲುಪುರಂ, ತಿರುಕೊಯಿಲೂರು, ಕೊಯಮತ್ತೂರು, ತಿರುನಲ್ಲಾರ್, ತಿರುಚ್ಚಿ, ಮಧುರೈ, ಚೆನ್ನೈ, ಊಟಿ ಇತ್ಯಾದಿ ಸ್ಥಳಗಳಿಗೆ ಸುಮಾರು 250 ಬಸ್ ಗಳು ಸಂಚರಿಸಲಿದೆ.

ಕೊರೋನ ಪ್ರಕರಣ ಹೆಚ್ಚಳದಿಂದಾಗಿ ಕರ್ನಾಟಕ -ತಮಿಳುನಾಡು ಮಧ್ಯೆ ಏ.27 ರಿಂದ ಕೆಎಸ್ಸಾರ್ಟಿಸಿ ಬಸ್ ಸಂಚಾರ ಸ್ಥಗಿತಗೊಳಿಸಲಾಗಿತ್ತು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News