×
Ad

ಬಿಜೆಪಿ ಕಿತ್ತಾಟದ ಪಿಕ್ಚರ್ ಮುಗಿಯದು: ಕಾಂಗ್ರೆಸ್ ಲೇವಡಿ

Update: 2021-08-22 23:04 IST

ಬೆಂಗಳೂರು, ಆ. 22: `ಸಿಎಂ ಬದಲಾದರೂ, ಮಂತ್ರಿಗಳು ಬದಲಾದರೂ, ಸರಕಾರವೇ ಬದಲಾದರೂ ಬಿಜೆಪಿ ವಿರುದ್ಧ ಬಿಜೆಪಿ ಕಿತ್ತಾಟ ಮುಗಿಯದ ಕತೆ! ಬಹುತೇಕ ಮಂತ್ರಿಗಳು ಒಲ್ಲದ ಖಾತೆ ಹೊಂದಿದ್ದಾರೆ, ಹೀಗಿರುವಾಗ ಅವರಿಂದ ಶ್ರದ್ಧೆ ಹಾಗೂ ಪರಿಣಾಮಕಾರಿ ಕೆಲಸಗಳನ್ನ ನಿರೀಕ್ಷಿಸುವುದು ಮೂರ್ಖತನ. `ಪಿಕ್ಚರ್ ಅಬಿ ಬಾಕಿ ಹೈ' ಎಂಬ ಸಚಿವ ಆನಂದ್ ಸಿಂಗ್ ಮಾತಿನಂತೆ, ಬಿಜೆಪಿಯ ಕಿತ್ತಾಟದ ಪಿಕ್ಚರ್ ಮುಗಿಯದು!' ಎಂದು ಕಾಂಗ್ರೆಸ್ ಲೇವಡಿ ಮಾಡಿದೆ.

ರವಿವಾರ ಸರಣಿ ಟ್ವೀಟ್ ಮಾಡಿರುವ ಕಾಂಗ್ರೆಸ್, `ಲಾಕ್‍ಡೌನ್ ನಷ್ಟದಿಂದ ರೈತರು, ಸರಕು ಸಾಗಣೆ ವಾಹನ ಮಾಲಕರು ಚೇತರಿಸಿಕೊಳ್ಳಲು ಪರದಾಡುತ್ತಿದ್ದಾರೆ, ಇದರೊಂದಿಗೆ ಇಂಧನ ತೈಲಗಳ ಬೆಲೆ ಏರಿಕೆಯ ಹೊರೆಯಿಂದ ಬದುಕು ದುಸ್ತರವಾಗಿರುವ ಹೊತ್ತಿನಲ್ಲಿ ಟೋಲ್ ಶುಲ್ಕ ಹೆಚ್ಚಿಸಿ ಜನರ ದರೊಡೆಗಿಳಿದಿದೆ. ಇಂತಹ ಜನವಿರೋಧಿ ಸರಕಾರ ಹಿಂದೆಯೂ ಇರಲಿಲ್ಲ, ಮುಂದೆಯೂ ಬರುವುದಿಲ್ಲ' ಎಂದು ಟೀಕಿಸಿದೆ.

`ಪ್ರತಿನಿತ್ಯ ಲಸಿಕೆ ಪಡೆಯಲು ಜನತೆ ಹರಸಾಹಸ ಪಡುತ್ತಿದ್ದಾರೆ, ರವಿವಾರದಂದು ಲಸಿಕೆಗಾಗಿ ಬರುವವರು ಹೆಚ್ಚು, ಹೀಗಿದ್ದೂ ಸರ್ಕಾರ ಲಸಿಕೆ ಕೊರತೆಯ ಬಗ್ಗೆ ಜಾಣಮೌನ ವಹಿಸಿದೆ. ರಾಜ್ಯಕ್ಕಾಗುತ್ತಿರುವ ಲಸಿಕೆ ಹಂಚಿಕೆಯ ಅನ್ಯಾಯ ಪ್ರಶ್ನಿಸುವುದು ಬಿಟ್ಟು ಬಿಜೆಪಿ ಇತರ ರಾಜ್ಯಗಳ ಲಸಿಕೆ ಲೆಕ್ಕ ತೋರಿಸಿ ನಿತ್ಯವೂ ಪ್ರಧಾನಿ ಮೋದಿ ಭಜನೆಯಲ್ಲಿ ತೊಡಗಿದೆ' ಎಂದು ಕಾಂಗ್ರೆಸ್ ವಾಗ್ದಾಳಿ ನಡೆಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News