ಸಾರಿಗೆ ಸಿಬ್ಬಂದಿ ವೇತನಕ್ಕಾಗಿ 49.31 ಕೋಟಿ ರೂ. ಬಿಡುಗಡೆಗೊಳಿಸಿದ ರಾಜ್ಯ ಸರಕಾರ

Update: 2021-08-24 11:52 GMT

ಬೆಂಗಳೂರು, ಆ.24: ಬಿಎಂಟಿಸಿ ಅಧಿಕಾರಿ ಮತ್ತು ಸಿಬ್ಬಂದಿಯ ಜುಲೈ ತಿಂಗಳ ವೇತನಕ್ಕಾಗಿ ರಾಜ್ಯ ಸರಕಾರ 49.31 ಕೋಟಿ ರೂ. ಬಿಡುಗಡೆ ಮಾಡಿ ಆದೇಶ ಹೊರಡಿಸಿದೆ. 

ಬಿಎಂಟಿಸಿಯ ಅಧಿಕಾರಿ ಮತ್ತು ಸಿಬ್ಬಂದಿಯ ಜುಲೈ ತಿಂಗಳ ವೇತನ ವೆಚ್ಚಕ್ಕಾಗಿ ಮೂಲ ವೇತನ ಮತ್ತು ತುಟ್ಟಿ ಭತ್ತೆಯ ಶೇ.50ರಷ್ಟು ಮೊತ್ತವನ್ನು ಸಾರಿಗೆ ಇಲಾಖೆ ಬಿಡುಗಡೆ ಮಾಡಿ ಆದೇಶಿಸಿದೆ.

ಆರ್ಥಿಕ ಇಲಾಖೆಯು ಇದಕ್ಕಾಗಿ 4931 ಲಕ್ಷ ರೂ.ಗಳನ್ನು ಹೆಚ್ಚುವರಿಯಾಗಿ ಒದಗಿಸಿದೆ. ಕೋವಿಡ್ ಎರಡನೆ ಅಲೆಯ ತೀವ್ರತೆಯಿಂದಾಗಿ ಬಿಎಂಟಿಸಿಯ ಆದಾಯ ನಿರೀಕ್ಷಿತ ಪ್ರಮಾಣದಲ್ಲಿ ಸಂಗ್ರಹವಾಗದ ಹಿನ್ನೆಲೆಯಲ್ಲಿ ವೇತನ ಪಾವತಿ ಮಾಡಲು ಅಗತ್ಯವಿರುವ ಅನುದಾನ ಬಿಡುಗಡೆಗಾಗಿ ಸರಕಾರಕ್ಕೆ ಮನವಿ ಮಾಡಲಾಗಿತ್ತು.

ಎಪ್ರಿಲ್, ಮೇ, ಜೂನ್ ತಿಂಗಳ ವೇತನಕ್ಕಾಗಿ ಕೆಎಸ್ಸಾರ್ಟಿಸಿಗೆ 15,264 ಲಕ್ಷ ರೂ., ಬಿಎಂಟಿಸಿಗೆ 14,793 ಲಕ್ಷ ರೂ., ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ 9,963 ಲಕ್ಷ ರೂ. ಹಾಗೂ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗೆ 8,730 ಲಕ್ಷ ರೂ. ಸೇರಿ ನಾಲ್ಕೂ ಸಂಸ್ಥೆಗಳಿಗೆ ಒಟ್ಟು 48,750 ಲಕ್ಷ ರೂ. ಅನುದಾನವನ್ನು ಬಿಡುಗಡೆ ಮಾಡಲಾಗಿತ್ತು ಎಂದು ಸಾರಿಗೆ ಇಲಾಖೆ ಹೊರಡಿಸಿರುವ ಆದೇಶದಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News