ಶಾಸಕ ಯತ್ನಾಳ್ ಕೊಠಡಿಗೆ ಅವಹೇಳನಕಾರಿ ಪೋಸ್ಟರ್
Update: 2021-08-24 22:11 IST
ಬೆಂಗಳೂರು, ಆ.24:ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಕುರಿತು ಶಾಸಕರ ಭವನದಲ್ಲಿನ ಕೊಠಡಿ ಬಾಗಿಲಿಗೆ ಅವಹೇಳನಕಾರಿ ಪೋಸ್ಟರ್ ಅಂಟಿಸಿರುವ ಘಟನೆ ನಡೆದಿದೆ.
ಒಸಾಮಾ ಬಿನ್ ಲಾಡೆನ್ಗೆ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ಹೋಲಿಸಿ ಭಿತ್ತಿಪತ್ರ ಅಂಟಿಸಲಾಗಿದ್ದು, ಈ ಚಿತ್ರಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
ಶಾಸಕರ ಭವನ 5ನೇ ಬ್ಲಾಕ್ ನಲ್ಲಿನ ಯತ್ನಾಳ್ ಕೊಠಡಿ ಸಂಖ್ಯೆ 2001ರಲ್ಲಿ ಕೊಠಡಿಯಲ್ಲಿ ಯಾರೂ ಇಲ್ಲದ ವೇಳೆ ಬಂದ ವ್ಯಕ್ತಿಗಳು ಬಾಗಿಲು, ಗೋಡೆ ಮೇಲೆ ಪೋಸ್ಟರ್ ಅಂಟಿಸಿದ್ದಾರೆ.
ಇತ್ತೀಚೆಗೆ ಯತ್ನಾಳ್ ಅವರು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ಅವಾಚ್ಯ ಶಬ್ದ ಬಳಸಿದ್ದರು. ಇದನ್ನು ವಿರೋಧಿಸಿ ಪೋಸ್ಟರ್ ಅಂಟಿಸಲಾಗಿದೆ ಎಂದು ಹೇಳಲಾಗುತ್ತದೆ.