ಕನ್ನಡಿಗ ಕೋಚ್ ಕಾಶಿನಾಥ್ ನಾಯ್ಕ್ ನಿವಾಸಕ್ಕೆ ಭೇಟಿ ನೀಡಿದ ಒಲಿಂಪಿಕ್ ಚಿನ್ನ ವಿಜೇತ ನೀರಜ್ ಚೋಪ್ರಾ
Update: 2021-08-24 23:38 IST
ಮಹಾರಾಷ್ಟ್ರ: 2015 ರಿಂದ ಸುಮಾರು ಮೂರು ವರ್ಷಗಳ ಕಾಲ ಪಟಿಯಾಲಾದಲ್ಲಿ ಜಾವಲಿನ್ ಎಸೆತದ ತರಬೇತಿ ನೀಡಿದ್ದ ಕಾಶಿನಾಥ್ ನಾಯ್ಕ್ ಅವರ ಮನೆಗೆ ನೀರಜ್ ಚೋಪ್ರಾ ಭೇಟಿ ನೀಡಿ ಅಭಿನಂದನೆ ಸಲ್ಲಿಸಿದ್ದಾರೆ.
2015 ರಿಂದ ಸುಮಾರು ಮೂರು ವರ್ಷಗಳ ಕಾಲ ಪಟಿಯಾಲಾದಲ್ಲಿ ಜಾವಲಿನ್ ಎಸೆತದ ತರಬೇತಿ ನೀಡಿದ್ದ ಕಾಶಿನಾಥ್ ನಾಯ್ಕ್ ಅವರ ಪುಣೆಯ ಕೋರೆಗಾಂವ್ ನಲ್ಲಿರುವ ಮನೆಗೆ ಇಂದು ಭೇಟಿ ನೀಡಿ ಸುಮಾರು ಒಂದು ಗಂಟೆಗಳ ಕಾಲ ಗುರು ಶಿಷ್ಯರು ಒಲಿಂಪಿಕ್ ಕ್ರೀಡಾಕೂಟದ ಬಗ್ಗೆ ಮಾತುಕತೆ ನಡೆಸಿದ್ದಾರೆ.
ಈ ವೇಳೆ ಕಾಶಿನಾಥ್ ನಾಯ್ಕ್ ಅವರ ಪತ್ನಿ ಚೈತ್ರಾ ಅವರು ಆರತಿ ಬೆಳಗಿ ಮನೆಗೆ ಸ್ವಾಗತಿಸಿದರು.